ಡಿ.೧೬ರಂದು ಸುಳ್ಯದಲ್ಲಿ `ನಿಜಮಹಾತ್ಮ ಬಾಬಾಸಾಹೇಬ’ ನಾಟಕ ಪ್ರದರ್ಶನ

0

ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ, ಭಾರತೀಯ ಮಜ್ದೂರು ಸಂಘ ಸಂಯೋಜಿತ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸುವ ನಾಟಕ ನಿಜಮಹಾತ್ಮ ಬಾಬಾಸಾಹೇಬ ಪ್ರದರ್ಶನ ಡಿ. ೧೬ರಂದು ಸುಳ್ಯದ ಯುವಜನ ಸಂಯುಕ್ತ ಮಂಡಳಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ರಾಷ್ಟ್ರ ಚಿಂತನ ವೇದಿಕೆ ಸುಳ್ಯ ಇದರ ಸಂಚಾಲಕ ಹರೀಶ್ ಕಂಜಿಪಿಲಿ ಹೇಳಿದ್ದಾರೆ.

ಡಿ.೧೩ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪರು ಈ ನಾಟಕವನ್ನು ರಚನೆ ಮಾಡಿ ನಿರ್ದೇಶಿಸಿದ್ದಾರೆ. ಸಂಜೆ ೬ ಗಂಟೆಯಿಂದ ನಾಟಕ ಪ್ರದರ್ಶನಗೊಳ್ಳಲಿದ್ದು ಉಚಿತ ಪ್ರವೇಶ ಇರುತ್ತದೆ. ಕಳೆದ ಬಾರಿಸತ್ಯವನ್ನೇ ಹೇಳುತ್ತೇನೆ” ಎಂಬ ನಾಟಕವನ್ನು ಪ್ರಸ್ತುತ ಪಡಿಸಲಾಗಿತ್ತು ಎಂದವರು ಹೇಳಿದರು.
ಅಂಬೇಡ್ಕರ್‌ರವರು ದೇಶ ಕಂಡ ಅಪ್ರತಿಮ ಹೋರಾಟಗಾರ. ಸಂವಿಧಾನವನ್ನು ರಚನೆ ಮಾಡಿದವರು. ಅವರ ಜೀವನ ಚರಿತ್ರೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಅಂಬೇಡ್ಕರ್‌ರ ಜೀವನ ಯಶೋಗಾಥೆಯನ್ನು ತಾಲೂಕಿನ ಜನತೆ ಅರಿತುಕೊಳ್ಳಲು ಈ ಪ್ರದರ್ಶನ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರ ಚಿಂತನ ವೇದಿಕೆಯ ಸಹ ಸಂಚಾಲಕ ಪಿ.ಕೆ.ಉಮೇಶ್, ಸದಸ್ಯರಾದ ಎ.ವಿ.ವಿಕ್ರಂ ಅಡ್ಪಂಗಾಯ, ಸುಳ್ಯ ತಾಲೂಕು ರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷ ಪ್ರಶಾಂತ್ ಭಟ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ. ಶಾಂತಿನಗರ, ಜೊತೆ ಕಾರ್ಯದರ್ಶಿ ಸುರೇಂದ್ರ ಕಾಮತ್, ಕೋಶಾಧಿಕಾರಿ ರವಿ ಎಸ್ ಜಾಲ್ಸೂರು, ಸಂಘಟನಾ ಕಾರ್ಯದರ್ಶಿ ಸುಂದರ ಪೆರಾಜೆ. ರಾಷ್ಟ್ರ ಚಿಂತನ ವೇದಿಕೆಯ ಸದಸ್ಯರಾದ ಚನಿಯ ಕಲ್ತಡ್ಕ, ಸೋಮನಾಥ ಪೂಜಾರಿ, ಸುನಿಲ್ ಕೇರ್ಪಳ ಇದ್ದರು.