ಬಿ.ಜೆ.ಪಿ. ಮಂಡಲಾಧ್ಯಕ್ಷರ ಮಾತು ಕೀಳು ಅಭಿರುಚಿ ಮತ್ತು ಕಾನೂನುಬಾಹಿರವಾದದ್ದು – ಸುಳ್ಯದ ಶಾಂತಿ ಕೆಡಿಸುವಂತದ್ದು : ಭರತ್ ಮುಂಡೋಡಿ

0

ಸುಳ್ಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷರು ಮಾಡಿದ ಭಾಷಣವನ್ನು ಮಾಧ್ಯಮದಲ್ಲಿ ಕೇಳಿದಾಗ, ನಿಜಕ್ಕೂ ಆಘಾತವಾಯಿತು. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ಅವರಾಡಿರುವ ಮಾತು ಒಂದು ರೀತಿ ಪ್ರಚೋದನಕಾರಿಯಾಗಿ ಅಲ್ಲಿ ನೆರೆದ ಜನರಿಗೆ ಮುಂದಿನ ದಿನದಲ್ಲಿ ಈ ರೀತಿ ಆದರೆ ಹಾರೆ ಪಿಕ್ಕಾಸು ಹಿಡಿದು‌ ಬೀದಿ ನಾಯಿಗಳಿಗೆ ಹೊಡೆದಂತೆ ಕಾಂಗ್ರೆಸ್ಸಿಗರಿಗೆ ಹೊಡೆಯುವ ಕಾಲ ಬರುತ್ತದೆ ಎಂಬ ಮಾತು ಆಡಿರುವುದು ಕಾನೂನು‌ ಬಾಹಿರವಾಗಿದೆ. ಮತ್ತು ಈ ಪ್ರದೇಶದ ಶಾಂತಿಯನ್ನು ಕೆದಡುವ ಭಾಷಣ ಆಗಿದೆ ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಹೇಳಿಕೆ ನೀಡಿದ್ದಾರೆ.

ಸುಳ್ಯ ಮಂಡಲ ಬಿಮಜೆ.ಪಿ. ಅಧ್ಯಕ್ಷರು ಇಂತಹ ಮಾತುಗಳಿಂದ ಶಾಂತಿಯಿಂದಿರುವ ಸುಳ್ಯದ ಶಾಂತಿ ಕೆದಡುವ ಕೃತ್ಯಕ್ಕೆ ಕೈಹಾಕಿದ್ದಾರೆ. ಅದಕ್ಕೆ ತಕ್ಕುದಾದ ಪ್ರತ್ಯುತ್ತರವನ್ನು ಕೊಡುವ ಸಾಮರ್ಥ್ಯ ಸುಳ್ಯದ ಕಾಂಗ್ರೆಸ್ಸಿಗರಿಗಿದೆ. ಅವರು ಭಾಷಣದಲ್ಲಿ ಕಾಂಗ್ರೆಸ್ ನ ಪುಂಡ ಪೋಕರಿಗಳು ಎಂಬ ಮಾತು ಆಡಿದ್ದಾರೆ. ಪುಂಡರು ಪೋಕರಿಗಳು ಇರುವುದು ಕಾಂಗ್ರೆಸ್ ನಲ್ಲಿ ಅಲ್ಲ. ಇವತ್ತು ಅವರು ಆಡಿರುವ ಮಾತುಗಳನ್ನು ಕೇಳಿದ ಸುಳ್ಯದ ಜನರಿಗೆ ಅರ್ಥ ಆಗ್ತದೆ – ಪುಂಡ ಪೋಕರಿಗಳು ಇರುವುದು ಭಾರತೀಯ ಜನತಾ ಪಕ್ಷದಲ್ಲಿ ಎಂಬುದು. ಪುತ್ತೂರು ಶಾಸಕರ ಬಗ್ಗೆ ಬಹಳ ಕೀಳಾಗಿ ಏಕವಚನದಲ್ಲಿ ಮಾತನಾಡಿರುವುದು, ದಿಗ್ಬಂಧನ ಮಾಡುವ ಮಾತುಗಳು ಇದನ್ನು ಸಾಬೀತುಪಡಿಸುತ್ತವೆ. ಸುಳ್ಯವನ್ನು ಇವರಿಗೆ ಯಾರೂ ಅಡವು ಇಟ್ಟಿಲ್ಲ ಎಂಬುದನ್ನು ತಿಳಿದುಕೊಂಡಿರಲಿ. ಸುಳ್ಯದ ಜನತೆ ಪುತ್ತೂರಿನ ಶಾಸಕರು ಬಂದರೆ ಗೌರವಿಸುತ್ತಾರೆ. ವೆಂಕಟ್ ವಳಲಂಬೆ ಯವರು ಆಡಿದ ಮಾತಿನಿಂದ ಅವರ ಸಂಸ್ಕ್ರತಿ ಏನೆಂದು‌ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅವರ ಮಾತು ಇತಿ ಮಿತಿಯಲ್ಲಿ ಇರಬೇಕು” ಎಂದು ಭರತ್ ಮುಂಡೋಡಿ ಎಚ್ಚರಿಕೆ ನೀಡಿದ್ದಾರೆ.