ಕಲ್ಲು, ಮರಳು ಸಮಸ್ಯೆ ಆರಂಭವಾಗಿರುವುದೇ ಬಿ.ಜೆ.ಪಿ. ಸರಕಾರವಿದ್ದಾಗ. ವೆಂಕಟ್ ವಳಲಂಬೆ ಭಾಷಣ ಅತ್ಯಂತ ಕೀಳುಮಟ್ಟದ್ದಾಗಿತ್ತು : ಎಂ.ವೆಂಕಪ್ಪ ಗೌಡ

0

ಬಿಜೆಪಿ ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷರು ಮಾಡಿದ ಭಾಷಣ ಕೀಳು‌ ಮಟ್ಟದ್ದಾಗಿತ್ತು. ವಾಸ್ತವವಾಗಿ ಆ ಸಮಸ್ಯೆ ಉದ್ಬವವಾಗಿರುವುದು 2011ರಲ್ಲಿ ಬಿಜೆಪಿ ಸರಕಾರ ಇರುವಾಗ.‌ಆಗ ಯಡಿಯೂರಪ್ಪರು‌ ಮುಖ್ಯಮಂತ್ರಿಯಾಗಿದ್ದ ಸಂದರ್ಭ” ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ, ನ್ಯಾಯವಾದಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮರಳು ಮತ್ತು ಕಲ್ಲಿನ‌ ವಿಚಾರದಲ್ಲಿ ಒಂದು ನೀತಿ ತಂದರು. ಸರಕಾರದ‌ ಬೊಕ್ಕಸ ತುಂಬಿಸುವ ನಿಟ್ಟಿನಲ್ಲಿ ಅದನ್ನು ತರಲಾಗಿತ್ತು. ಅಂದಿನಿಂದ ಇಂದಿನವರೆಗೂ ಅದೇ ರೀತಿ ಮುಂದುವರಿದಿದೆ. ಕಾಂಗ್ರೆಸ್ ನವರನ್ನುದ್ದೇಶಿಸಿ ವೆಂಕಟ್ ವಳಲಂಬೆ ಕೀಳು ಮಟ್ಟದ ಪದ ಬಳಕೆ ಮಾಡಿರುವುದು ನಮಗೆಲ್ಲ ನೋವುಂಟುಮಾಡಿದೆ. ಅವರು ಹಾಗೆ ಮಾತನಾಡಬಾರದಿತ್ತು. ಅವರ ಮಾತು ಕೇಳುವಾಗ ಅವರ ಭಾಷೆ ಏನೆಂದು ಜನರಿಗೆ ಅವರೇ ತೋರಿಸಿದ್ದಾರೆ. ಅವರ ಮಾತನ್ನು ನಾವು ಖಂಡಿಸ್ತೇವೆ. ಅವರು ಪುತ್ತೂರು ಶಾಸಕರ ಕುರಿತು ಆಡಿದ ಮಾತುಗಳಿಗೆ ನಾವು ಕೂಡಾ ಉತ್ತರ ನೀಡುತ್ತೇವೆ ಎಂದು ಎಂ‌.ವೆಂಕಪ್ಪ ಗೌಡರು ತಿಳಿಸಿದ್ದಾರೆ.