ಬೆಳ್ಳಾರೆ ಜ್ಞಾನದೀಪ ಇಂಟರ್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಗಗನ್ ಎಂ ಎಸ್ ಕಾರ್ಯದರ್ಶಿ ತುಳಸಿ ಜಿ ಆಯ್ಕೆ


ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಪ್ರವರ್ತಿತ ಇಂಟರ್ಯಾಕ್ಟ್ ಕ್ಲಬ್ ಆಫ್ ಜ್ಞಾನದೀಪ ಬೆಳ್ಳಾರೆಯ 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಗಗನ್ ಎಂ ಎಸ್, ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ತುಳಸಿ ಜಿ, ಖಜಾoಜಿಯಾಗಿ ಎಸ್ ಎಸ್ ಎಲ್ ಸಿ ಯ ಶ್ರೀಕಾಂತ್ ಎಂ ಎನ್, ಉಪಾಧ್ಯಕ್ಷರಾಗಿ ಎಸ್ ಎಸ್ ಎಲ್ ಸಿ ಯ ನಿಹಾನ್ ಕೆ ಜಿ, ಜತೆಕಾರ್ಯದರ್ಶಿಯಾಗಿ ಎಸ್ ಎಸ್ ಎಲ್ ಸಿ ಯ ಹಿತಾ ಬಿ, ಕಮ್ಯುನಿಟಿ ಸರ್ವಿಸ್ ಚೆಯರ್ ಮೆನ್ ಆಗಿ ಮಹಮ್ಮದ್ ತಂಜಿಮ್, ಇನ್ಸ್ಟಿಟ್ಯೂಟ್ ಸರ್ವಿಸ್ ಚೆಯರ್ ಮೆನ್ ಆಗಿ ಅದ್ವಿತ್ ಗೌಡ, ಕ್ಲಬ್ ಸರ್ವಿಸ್ ಚೆಯರ್ ಮೆನ್ ಆಗಿ ಮೊಹಮ್ಮದ್ ಫಾಹೀಮ್, ಇಂಟರ್ ನ್ಯಾಷನಲ್ ಸರ್ವಿಸ್ ಚೆಯರ್ ಮೆನ್ ಆಗಿ ಮೊಹಮ್ಮದ್ ಶಮ್ಮಾಸ್, ಶಿಕ್ಷಕ ಪ್ರತಿನಿಧಿಯಾಗಿ ಸಂಸ್ಥೆಯ ನಿರ್ದೇಶಕ, ವಾಣಿಜ್ಯಶಾಸ್ತ್ರ ಉಪನ್ಯಾಸಕ ಉಮೇಶ್ ಮಣಿಕ್ಕಾರ ಆಯ್ಕೆಯಾಗಿದ್ದಾರೆ.