ಲ.ರೇಣುಕಾ ಸದಾನಂದ ಜಾಕೆ ಎಂಜೆಎಫ್ ರವರಿಗೆ ಬೆಸ್ಟ್ ರೀಜನ್ ಅಂಬಾಸಿಡರ್ ಪುರಸ್ಕಾರ

0

2024- 25 ನೇ ಸಾಲಿನಲ್ಲಿ ಪ್ರಾಂತ್ಯ ಐದರ ರೀಜನ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸಿದ್ದ ಲ.ರೇಣುಕಾ ಸದಾನಂದ ಜಾಕೆಯವರ ಸೇವೆಯನ್ನು ಗುರುತಿಸಿ ಲಯನ್ಸ್ ಜಿಲ್ಲೆ 317 ಡಿ.ಯಲ್ಲಿ ಅತ್ಯುತ್ತಮ ಪ್ರಾಂತೀಯ ರಾಯಭಾರಿ ಪುರಸ್ಕಾರ ನೀಡಲಾಗಿದೆ.

2024 – 25ನೇ ಅವಧಿಯಲ್ಲಿ ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಗೆ ಅಗತ್ಯವಿರುವ ಸ್ಮಾರ್ಟ್ ಕ್ಲಾಸ್ ಗಾಗಿ ಅಂತರಾಷ್ಟ್ರೀಯ ಸಂಸ್ಥೆ ಎಲ್ ಸಿ ಐ ಎಫ್ ನ ಸಹಕಾರದಿಂದ ಸುಳ್ಯ ಲಯನ್ಸ್ ಸಂಸ್ಥೆಯ ಮುಖಾಂತರ ಶಾಲೆಗೆ ಕೊಡುಗೆಯನ್ನು ನೀಡುವಲ್ಲಿ ಇವರು ಶ್ರಮಿಸಿದ್ದರು.

ಜು. 20ರಂದು ಮಂಗಳೂರಿನ ವಾಮಂಜೂರು ಚರ್ಚ್ ಸಭಾಂಗಣದಲ್ಲಿ ನಡೆದ 2024- 25 ನೇ ಸಾಲಿನ ಲಯನ್ಸ್ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಲ.ಭಾರತಿ ಬಿ.ಎಂ ಪಿ ಎಂ ಜೆ ಎಫ್ D- 8 ಇವರು ನೀಡಿದರು.