ಸಂಪಾಜೆ ;ವಲಯ ಕಾಂಗ್ರೆಸ್ ಪ್ರಮುಖರ ಸಭೆ

0

ಕಾರ್ಮಿಕ ನಾಯಕ ಚಂದ್ರಲಿಂಗಂ ಮತ್ತು ಆನಂದ ಎಸ್.ಪಿ ಪೆಲ್ತಡ್ಕರವರಿಗೆ ಶ್ರದ್ಧಾಂಜಲಿ

ಸಂಪಾಜೆಯ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ, ಡಿ ಡಿ ಎಲ್ ಆರ್, ಎಡಿ ಎಲ್ ಆರ್, ಬಳಿಗೆ ನಿಯೋಗ ಭೇಟಿಗೆ ನಿರ್ಧಾರ

ಸಂಪಾಜೆಯಲ್ಲಿ ಕಾಂಗ್ರೆಸ್ ಪಕ್ಷದ ವಲಯ ಪ್ರಮುಖರ ಸಭೆ ಕಲ್ಲುಗುಂಡಿಯ ಕಲ್ಲುಂಪುರತ್ ಕಾಂಪ್ಲೆಕ್ಸ್ ನಲ್ಲಿ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೋಮಶೇಖರ್ ಕೊಯಿಂಗಾಜೆಯವರು ವಿವಿಧ ವಿಷಯಗಳ ಬಗ್ಗೆ ಅವರು ಮಾತನಾಡಿದರು. ಗ್ರಾಮದ ಜನರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕಾಗಿ ವಿವಿಧ ರೀತಿಯ ಹೋರಾಟಕ್ಕೆ ಅಣಿಯಾಗಲು ನಿರ್ಧರಿಸಲಾಗಿ ಅಗಸ್ಟ್ 6 ರಂದು ಜಿಲ್ಲಾಧಿಕಾರಿ, ಡಿ ಡಿ ಎಲ್ ಆರ್, ಎಡಿ ಎಲ್ ಆರ್, ಬಳಿಗೆ ನಿಯೋಗ ಬೇಟಿಗೆ ನಿರ್ಧಾರಿಸಲಾಗಿ ಫ್ಲಾಟಿಂಗ್, ನೈನಿಲವೆನ್, ಕನ್ವರ್ಷನ್,94.C, ಜಂಟಿ ಸರ್ವೆ ಬಗೆಗಿನ ಸಮಸ್ಯೆಗಳ ಪರಿಹಾರಕ್ಕಾಗಿ ವಲಯ ಕಾಂಗ್ರೆಸ್ ವತಿಯಿಂದ ಗಂಭೀರ ಪ್ರಯತ್ನ ನಡೆಸುವುದು ಎಂದು ತೀರ್ಮಾನಿಸಲಾಯಿತು.

ಈ ವಿಷಯಗಳ ಪಟ್ಟಿ ಮಾಡಲು ಬಾಲಚಂದ್ರ ಗೂನಡ್ಕರವರಿಗೆ ಉಸ್ತುವಾರಿ ವಹಿಸಲಾಯಿತು. ಪಕ್ಷದ ಸಂಘಟನೆ ದೃಷ್ಟಿಯಿಂದ ಅಗಸ್ಟ್ 17 ರಂದು ಸ್ವಾತಂತ್ರ್ಯ ಸ್ಮರಣೆ ಹಾಗೂ ಕಟ್ಟ ಕಡೆಯ ವ್ಯಕ್ತಿಗೂ ಸ್ವಾತಂತ್ರ್ಯದ ಅನುಭವ ವಾಗಲು ಸಂವಿಧಾನದ ಜಾರಿ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ವರ್ಕ್ ಶಾಪ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ,ನಾಯಕರ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಎಂದು ನಿರ್ಧರಿಸಲಾಯಿತು.


ಕಾಂಗ್ರೆಸ್ ಸಂಘಟನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.ಪಕ್ಷದ ಕಾರ್ಯಕರ್ತರು ಮತದಾರರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.

ಸಂಪಾಜೆ ವಲಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಾನಿ.ಕೆ.ಪಿ ಪ್ರಾಸ್ತಾವಿಕ ವಾಗಿ ಮಾತನಾಡಿ ಈ ಹಿಂದಿನ ಪಕ್ಷದ ಸಮಾವೇಶದಲ್ಲಿ ಆಯ್ಕೆಗೊಂಡ ಮಹಿಳಾ ಕಾಂಗ್ರೆಸ್, ಯುವ ಕಾಂಗ್ರೆಸ್, ಅಲ್ಪಸಂಖ್ಯಾತ ಕಾಂಗ್ರೆಸ್, ಮತ್ತು ಸಾಮಾಜಿಕ ಜಾಲತಾಣಗಳ ಸಮಿತಿಗಳನ್ನು ಬಲಪಡಿಸಲು ವಿಶೇಷ ಸಭೆಯನ್ನು ಆದಷ್ಟು ಬೇಗ ಸೇರಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ,ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ವಸಂತ ಪೆಲ್ತಡ್ಕ ,ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ ,ಹಿರಿಯರು ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ಯಮುನಾ ಬಿ.ಎಸ್, ಸದಸ್ಯರುಗಳಾದ ರಾಜು ಜ್ಞಾನಶೀಲನ್ , ಪ್ರಮೀಳ ಪೆಲ್ತಡ್ಕ ,ಉಷಾ ನಾಯ್ಕ,ತಾಲೂಕು ಗ್ಯಾರೆಂಟಿ ಸಮಿತಿ ಸದಸ್ಯೆಯಾದ ಶ್ರೀಮತಿ ಕಾಂತಿ.ಬಿ.ಎಸ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ನಿತಿನ್ ,ಮಹಿಳಾ ಕಂಗ್ರೆಸ್ ಅಧ್ಯಕ್ಷೆ ಲಲನ.ಕೆ.ಆರ್. ಸಾಮಾಜಿಕ ಜಾಲತಾಣದ ಅಧ್ಯಕ್ಷ ಬಾಲಚಂದ್ರ, ಹಿರಿಯ ನಾಯಕರಾದ ಬೆಂಜಮಿನ್ ಡಿಸೋಜ,ತಾಜ್ ಮಹಮ್ಮದ್, ಹಮೀದ್ ಹೆಚ್ ಉಮ್ಮರ್.ಪಿ.ಎ,ನ್ಯಾಯವಾದಿ ಡೊಮಿನಿಕ್‌ ,ಶಿವಲಿಂಗ ಎರಿಲಡ್ಪು ,ನಾಗಮುತ್ತು ನೆಲ್ಲಿಕುಮೇರಿ, ಕೆರೋಲಿನಾ ಕ್ರಾಸ್ತಾ,ಫಿಲೋಮಿನ ಕ್ರಾಸ್ತ,ಮೈಕಲ್ ಪಾಯಸ್, ಮತ್ತಿರರು ಹಾಜರಿದ್ದರು. ಲೂಕಾಸ್ ಟಿ.ಐ ಸ್ವಾಗತಿಸಿ ,ವಸಂತ ಪೆಲ್ತಡ್ಕ ವಂದಿಸಿದರು.