ಡಾl ವಿದ್ಯಾಪ್ರಸನ್ನತೀರ್ಥ ಶ್ರೀಗಳ 29 ನೇ ಚಾತುರ್ಮಾಸ್ಯ ಪ್ರಯುಕ್ತ ಸುಬ್ರಹ್ಮಣ್ಯದಲ್ಲಿ ಇಂದಿನಿಂದ ಸಾಂಸ್ಕೃತಿಕ ವೈಭವ, ಆಶೀರ್ವಚನ ಮತ್ತು ಪ್ರವಚನ

0

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಶ್ರೀಗಳ 29ನೇ ಚಾತುರ್ಮಾಸ್ಯ ವೃತದ ಪ್ರಯುಕ್ತ “ಸಾಂಸ್ಕೃತಿಕ ವೈಭವ” ಜು.26 ರಿಂದ ಆ.1 ರ ವರಗೆ ನಡೆಯಲಿದ್ದು ಇಂದು ಮಠದ ಶ್ರೀಗಳು ದೀಪೋಜ್ವಲನೆ ಮಾಡಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಿದ್ದಾರೆ.

ಶ್ರೀ ಸುಬ್ರಹ್ಮಣ್ಯ ಮಠದ ‘ಅನಿರುದ್ಧತೀರ್ಥ’ ವೇದಿಕೆ ಕಾರ್ಯಕ್ರಮಗಳು ಜರುಗಲಿವೆ.
ಇಂದು ಸಾಯಂಕಾಲ 4-30ಕ್ಕೆ ಸರಿಯಾಗಿ ಮಂಗಳವಾದ್ಯ ಹಾಗೂ ಶ್ರೀ ಮಠದ ವೈದಿಕ ವೃಂದದವರಿಂದ ವೇದ ಘೋಷಗಳು ನಡೆಯಲಿದೆ. ಬಳಿಕ ಶ್ರೀಗಳವರಿಂದ “ಸಾಂಪ್ರದಾಯಿಕತೆಗಳಿಗೆ ವೈಜ್ಞಾನಿಕ ಹಿನ್ನೆಲೆ”
ಆಶೀರ್ವಚನ ಮತ್ತು ಪ್ರವಚನ ನಡೆಯಲಿದೆ. ಆ ಬಳಿಕ ಶ್ಯಾನುಬೋಗ ಸಹೋದರಿಯರು ಬೆಂಗಳೂರು ಇವರಿಂದ “ದಾಸರ ಪದಗಳ ಗಾಯನ” ನಡೆಯಲಿದೆ. ಜು.27 ರಂದು ಸಂಜೆ ಯಕ್ಷಗಾನ ಪದಗಳ ಗಾಯನ ಬಳಿಕ ಯಕ್ಷಗಾನ ತಾಳಮದ್ದಳೆ “ವಾಲಿಮೋಕ್ಷ” ಧೀ ಶಕ್ತಿ ಮಹಿಳಾ ಯಕ್ಷ ಬಳಗ, ತೆಂಕಿಲ ಇವರು ನಡೆಸಿ ಕೊಡಲಿದ್ದಾರೆ. ಜು. 28 ರ ಸಂಜೆ ಗಂಟೆ 5-00ರಿಂದ 6-00ರ ತನಕ ವಿದ್ಯಾಪ್ರಸನ್ನ ಶ್ರೀಗಳಿಂದ ” ಶ್ರೀಮದ್ ಭಾಗವತದ ಆಯ್ದ ಪ್ರಸಂಗಗಳು” ಪ್ರವಚನ ನಡೆಯಲಿದೆ. ಬಳಿಕ ಕುಮಾರಿ ವಸುಪ್ರಧಾ ಹಾಗೂ ವಸುಂಧರ ಸಹೋದರಿಯರಿಂದ ‘ಹರಿಕಥಾ ಸತ್ಸಂಗ” ನಡೆಯಲಿದೆ. ಜು. 2 ಸಂಜೆ ಗಂಟೆ 5-00ರಿ೦ದ 6-00ರ ತನಕ ಶ್ರೀ ಶ್ರೀಗಳವರಿಂದ “ಧಾರ್ಮಿಕ ನಂಬಿಕೆಯಲ್ಲಿ ನಾಗದೇವರಿಗಿರುವ ಮಹತ್ವ” ಎಂಬ ವಿಷಯದ ಬಗ್ಗೆ ಪ್ರವಚನ ನಡೆದು ಬಳಿಕ ವಿದ್ವಾನ್ ಕಾಂಚನ ಈಶ್ವರ ಭಟ್ ರವರ ಶಿಷ್ಯರಾದ ವೆಂಕಟ ಯಶಸ್ವಿ ಮತ್ತು ವಿಜೇತ ಸುಬ್ರಹ್ಮಣ್ಯ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ‌ ಜು. 30 ರ ಸಂಜೆ ಗಂಟೆ 5-00ರಿಂದ 6-00ರ ತನಕ ವಿದ್ಯಾ ಪ್ರಸನ್ನ ಶ್ರೀಗಳವರಿಂದ “ರಾಮಾಯಣದಲ್ಲಿ ಬರುವ ನೆನಪಿಡಲೇಬೇಕಾದ ನೀತಿಪಾಠಗಳು” ವಿಷಯದ ಬಗ್ಗೆ ಪ್ರವಚನ ನಡೆದು ಶ್ರೀಮತಿ ಸೌರಭ ಸರ್ವಜ್ಞ ಕಡೇಶಿವಾಲಯ ಮತ್ತು ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ ” ಹಾಗೂ ದಾಸರಪದಗಳ ಗಾಯನ ನಡೆಯಲಿದೆ. .ಜು. 31 ಸಂಜೆ ಗಂಟೆ 5-00ರಿಂದ 7-00ರ ತನಕ ಧಾರ್ಮಿಕ ಸಂವಾದ ಚಿಂತನ – ಮಂಥನ ವಿಷಯ : ವಾಸ್ತುಶಾಸ್ತ್ರ-ನಂಬಿಕೆಗಳು ಮತ್ತು ಅಪನಂಬಿಕೆಗಳು ನಡೆಯಲಿದೆ. ಅಧ್ಯಕ್ಷತೆಯನ್ನು ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ವಹಿಸಲಿದ್ದು ಚಿಂತಕರಾಗಿ ಪ್ರಖ್ಯಾತ ವಾಸ್ತುಶಾಸ್ತ್ರಜ್ಞರ ಹಾಗೂ ಆಗಮಶಾಸ್ತ್ರಜ್ಞರಾದ
ವಿದ್ವಾನ್ ಸುಬ್ರಹ್ಮಣ್ಯ ಭಟ್, , ವೇದವ್ಯಾಸ ಸಂಶೋಧನಾ ಕೇಂದ್ರ ಗುಂಡಿಬೈಲು ಇದರ ನಿರ್ದೇಶಕರಾದ ಡಾ| ಸಗ್ರಿ ಆನಂದ ತೀರ್ಥರು ಭಾಗವಹಿಸಲಿದ್ದಾರೆ. ಆ.1 ರ ಸಂಜೆ ಕೆ. ಭಾಸ್ಕರ ಬಾರ್ಯ, ಬೊಳುವಾರು ಪುತ್ತೂರು ಇವರ ನಿರ್ದೇಶನದಲ್ಲಿ ‘ವೀರಮಣಿ ಕಾಳಗ ” ಯಕ್ಷಗಾನ ತಾಳಮದ್ದಳೆ ನಡೆಸಿಕೊಡಲಿದ್ದಾರೆ. ಆ. 2 ರ ‘ಸಂಜೆ ಗಂಟೆ 5-00ರಿಂದ ಪ್ರವಚನ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ನಡೆಯಲಿದೆ. ಬಳಿಕ ಕೆ.ಯಜ್ಞೇಶ್‌ ಆಚಾ‌ರ್ ಗಾಯನ ನಡೆಯಲಿದೆ.