ಮೇನಾಲ: ಆಟಿಕೂಟ ಕಾರ್ಯಕ್ರಮ

0

ಗ್ರಾಮ ಪಂಚಾಯತ್ ಅಜ್ಜಾವರ, ಅರಿವು ಕೇಂದ್ರ ಗ್ರಂಥಾಲಯ ಮಾಹಿತಿ ಕೇಂದ್ರ,
ಶ್ರೀ ರಕ್ಷಾ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ)ಅಜ್ಜಾವರ, ಶ್ರೀನಿಧಿ ಸ್ತ್ರೀ ಶಕ್ತಿ ಸಮೂಹ ಅಜ್ಜಾವರ,ಪ್ರತಾಪ ಯುವಕ ಮಂಡಲ (ರಿ)ಅಜ್ಜಾವರ , ಚೈತ್ರಾಯುವತಿ ಮಂಡಲ( ರಿ) ಅಜ್ಜಾವರ, ವಿಷ್ಣು ಯುವಕ ಮಂಡಲ ಮೇನಾಲ, ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ಅಜ್ಜಾವರ ಇದರುಗಳ ಜಂಟಿ ಆಶ್ರಯದಲ್ಲಿ
ಆಟಿ ಕೂಟ ಕಾರ್ಯಕ್ರಮ
ಮೇನಾಲದ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜು. 25 ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಶ್ರೀಮತಿ ಪದ್ಮಿನಿ ಲೋಕೇಶ್ ಇವರ ಪ್ರಾರ್ಥನೆ ಯೊಂದಿಗೆ ಪ್ರಾರಂಭಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ದೇವಕಿಯವರು ಚೆನ್ನಮಣೆ ಕಾಯಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭವನ್ನು ಹಾರೈಸಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ವಿಮಲ ಅರುಣ ಪಡ್ಡಂಬೈಲುಯವರು ಆಟಿ ಆಚರಣೆಯ ಮಹತ್ವ, ತಿನಿಸುಗಳು ಇಂದಿನ ಕಾಲದಲ್ಲಿ ಆಚರಣೆ ಮಾಡುತ್ತಿರುವ ಆಟಿಯ ಮಹತ್ವದ ಬಗ್ಗೆ ಕವನದ ಮೂಲಕ ಮಾಹಿತಿಯನ್ನು ನೀಡಿದರು.

ಎನ್ ಆರ್ ಎಲ್ ಎಂ ತಾಲೂಕು ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ,
ವಲಯ ಮೇಲ್ವಿಚಾರಕ ಮಹೇಶ್, ಶ್ರೀಮತಿ ರೂಪ, ಶ್ರೀಮತಿ ಜಯಲಕ್ಷ್ಮೀ ,ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ಲ ಉಪಸ್ಥಿತರಿದ್ದರು.

ಆರೋಗ್ಯ ಶಿಕ್ಷಣಾಧಿಕಾರಿ ಪ್ರಮೀಳಾರವರು ಆರೋಗ್ಯ,ಆಹಾರ,ಪೋಷಣೆ,ನೀರು,ನೈರ್ಮಲ್ಯ ಕುರಿತು ಮಾಹಿತಿ ನೀಡಿದರು.

ವಕೀಲ ಭಾಸ್ಕರ್ ರಾವ್ ಲಿಂಗತ್ವ ಕುರಿತಾಗಿ ಮಹಿಳಾ ಹಕ್ಕುಗಳು, ಮಹಿಳಾ ಕಾನೂನು ಬಗ್ಗೆ ಮಾಹಿತಿ ನೀಡಿದರು. ಶ್ರೀರಕ್ಷಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಮತಾ,ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ರೈ ಮೇನಾಲ, ಶ್ವೇತಾ ಶಿರಾಜೆ, ದಿವ್ಯ ಪಡ್ಡಂಬೈಲು, ಸತ್ಯವತಿ ಬಸವನ ಪಾದೆ, ಜಯರಾಮ,ಗ್ರಂಥಾಲಯ ಮೇಲ್ವಿಚಾರಕಿ ಕು. ಲಕ್ಷ್ಮಿ, ಶ್ರೀನಿಧಿ ಸ್ತ್ರೀಶಕ್ತಿ ಸಮೂಹ ಅಜ್ಜಾವರದ ಅಧ್ಯಕ್ಷೆ ಗೀತಾ, ವಿಷ್ಣು ಯುವಕ ಮಂಡಲದ ಅಧ್ಯಕ್ಷ ರಂಜಿತ್ ರೈ, ಸುದ್ದಿ ಸುಳ್ಯ ಹಬ್ಬ ಗ್ರಾಮ ಸಮಿತಿ ಅಜ್ಜಾವರದ ಗೌರವಾಧ್ಯಕ್ಷ ಲೋಕಯ್ಯ ಗೌಡ ಅತ್ಯಾಡಿ, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಅಡ್ಕ, ಸುಳ್ಯ ಸುದ್ದಿ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ಚೈತ್ರ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ ಶಶ್ಮಿ ಭಟ್, ಪ್ರತಾಪ ಯುವಕ ಮಂಡಲ ಅಧ್ಯಕ್ಷ ಗುರುರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಟಿಯ ಖಾದ್ಯ ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಲತಾಶ್ರೀ ಸುಪ್ರೀತ್ ಮೊಂಟಡ್ಕ, ತಾಲೂಕು ವ್ಯವಸ್ಥಾಪಕಿ ಶ್ವೇತಾ, ಸಂಪಾಜೆ ಕೃಷಿ ಸಖಿ ಮೋಹಿನಿ (ನಿಶಾ )ಭಾಗವಹಿಸಿದ್ದರು.
ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.58 ಬಗೆಯ ಆಟಿಯ ವಿಶೇಷ ಖಾದ್ಯ ಗಳಿದ್ದವು.ಆಟಿ ತಿಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀಮತಿ ಜಯಶ್ರೀ ನಾಗೇಶ್ ಸ್ವಾಗತಿಸಿ, ಯುವತಿ ಮಂಡಲ ಸಾಂಸ್ಕೃತಿಕ ಕಾರ್ಯದರ್ಶಿ ಧನಲಕ್ಷ್ಮೀ ಸಂತೋಷ್ ವಂದಿಸಿದರು. ಶ್ರೀಮತಿ ವಿಶಾಲ ಸೀತಾರಾಮ ಕಾರ್ಯಕ್ರಮ ನಿರೂಪಿಸಿದರು.