ಅರಂತೋಡು ಘನತಾಜ್ಯ ಘಟಕದ ಪುನರ್ ನಿರ್ಮಾಣಕ್ಕೆ ಸುಳ್ಯ ಶಾಸಕರಿಂದ ರೂ. 5 ಲಕ್ಷ ಅನುದಾನ

0

ಇತ್ತೀಚೆಗೆ ಅಗ್ನಿ ದುರಂತಕ್ಕೆ ತುತ್ತಾದ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರಂತೋಡು ಗ್ರಾಮ ಪಂಚಾಯತ್‌ನ ಘನ ತಾಜ್ಯ ಘಟಕಕ್ಕೆ (ಸ್ವಚ್ಛ ಸಂಕೀರ್ಣಕ್ಕೆ) ಮರು ನಿರ್ಮಾಣಕ್ಕೆ ಅನುದಾನಕ್ಕಾಗಿ ಸುಳ್ಯ ಶಾಸಕರಾದ ಕು. ಭಾಗೀರಥಿ ಮುರುಳ್ಯರವರಿಗೆ ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ ಮನವಿ ಸಲ್ಲಿಸಿದರು.


ಮನವಿಗೆ ಸ್ಪಂದಿಸಿರುವ ಶಾಸಕರು ತಮ್ಮ ಪ್ರಾದೇಶಿಕ ಅಭಿವೃದ್ಧಿ ಅನುದಾನದಲ್ಲಿ ರೂ ೫ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಅರಂತೋಡು ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಂತೋಷ ಕುತ್ತಮೊಟ್ಟೆ, ಆರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರದ ನಿಕಟ ಪೂರ್ವ ಸದಸ್ಯರಾದ ಹರೀಶ್ ಕಂಜಿಪಿಲಿ, ಆರಂತೋಡು ಸಹಕಾರಿ ಸಂಘದ ಸಮೃದ್ಧಿ ಮಾರ್ಕ್‌ನ ಅಧ್ಯಕ್ಷರಾದ ದಯಾನಂದ ಕುರುಂಜಿ ಮತ್ತು ತಾಲೂಕು ಪಂಚಾಯಿತ್ ಮಾಜಿ ಅಧ್ಯಕ್ಷರಾದ ಚನಿಯ ಕಲ್ತಡ್ಕ ಉಪಸ್ಥಿತರಿದ್ದರು.