ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪದವಿ ಪ್ರದಾನ – 2025

0

ಶಿಕ್ಷಣದ ಮೂಲಕ ಸುಳ್ಯದ ಬೆಳವಣಿಗೆ ಕಂಡವರು ಡಾ. ಕೆವಿಜಿ : ಡಾ. ಬಿ.ಎಲ್. ಸುಜಾತ ರಾಥೋಡ್

ಡಾ. ಕುರುಂಜಿಯವರು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಮೂಲಕ ಸುಳ್ಯವನ್ನು ಬೆಳೆಸಿದವರು. ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ ಮತ್ತು ಅವರ ತಂಡ ಶಿಕ್ಷಣ ಸಂಸ್ಥೆಗಳು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಸಂಸ್ಥೆಯ ಮೇಲೆ ಭರವಸೆ ಇಟ್ಟು ತಮ್ಮ ಮಕ್ಕಳನ್ನು ಸೇರಿಸಿದ ಪೋಷಕರ ಕನಸು ಇಂದು ನನಸಾಗಿದೆ ಎಂದು ಕರ್ನಾಟಕ ಡೈರೆಕ್ಟೊರೇಟರೇಟ್ ಆಫ್ ಮೆಡಿಕಲ್ ಡೈರೆಕ್ಟರ್ ಡಾ. ಬಿ.ಎಲ್. ಸುಜಾತ ರಾಥೋಡ್ ಹೇಳಿದರು.

ಅವರು ಆ. 9ರಂದು ಕೆವಿಜಿ ಮೆಡಿಕಲ್ ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪದವಿ ಪ್ರದಾನ – 2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದರು ಮಾತನಾಡಿ ಪದವಿ ಪಡೆದ ನೀವು ಸೇವಾ ಮನೋಭಾವದಿಂದ ನಿಷ್ಠೆಯಿಂದ ಕರ್ತವ ನಿರ್ವಹಿಸಿ. ಪ್ರತಿ ರೋಗಿಯನ್ನೂ ಗೌರವದಿಂದ ನೋಡಿ. ಟೀಮ್ ವರ್ಕ್ ಮೂಲಕ ಎಲ್ಲರೊಂದಿಗೆ ಜೊತೆಯಾಗಿ ಸೇವೆ ನೀಡಿ ಎಂದರು. ಎ.ಒ.ಎಲ್.ಇ ಉಪಾಧ್ಯಕ್ಷೆ ಶ್ರೀಮತಿ ಶೋಭ ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ, ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ. ನೀಲಾಂಬಿಕೈ ನಟರಾಜನ್, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸಿ. ಆರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಪ್ರಾಂಶುಪಾಲೆ ಹಾಗೂ ಎಒಎಲ್ಇ ಕಾರ್ಯದರ್ಶಿ ಡಾ. ಐಶ್ವರ್ಯ ಕೆ.ಸಿ ಸ್ವಾಗತಿಸಿ, ಪ್ಯಾರಾಮೆಡಿಕಲ್ ಕೋ-ಆರ್ಡಿನೇಟರ್ ಡಾ. ನಮ್ರತಾ ಕೆ.ಜಿ ವಂದಿಸಿದರು. ಪ್ರೊ & ಡಾ. ಸತ್ಯವತಿ ಆರ್. ಆಳ್ವ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಕೆವಿಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಕೋರ್ಡಿನಟರ್ ಡಾ. ನವ್ಯ ಬಿ.ಎನ್ ಮುಖ್ಯ ಅತಿಥಿಯವರನ್ನು ಪರಿಚಯಿಸಿದರು.

ಬಯೋ ಕೆಮಿಸ್ಟ್ರಿ ಉಪನ್ಯಾಸಕಿ ಡಾ. ಶೃತಿ ರೈ ಪಿ ವಿಶ್ವವಿದ್ಯಾಲಯದ ರ್ಯಾಂಕ್ ವಿಜೇತರ ಪಟ್ಟಿ ವಾಚಿಸಿದರು. ಕು. ಅಕ್ಷಿತಾ ಪ್ರಾರ್ಥಿಸಿದರು. ಕು. ಅಕ್ಷಿತಾ ಬಿ.ಎಂ ಮತ್ತು ಕು. ವಿಮರ್ಶಾ ಕಾರ್ಯಕ್ರಮ ನಿರೂಪಿಸಿದರು.