ಕೊಲ್ಲಮೊಗ್ರು ನೆಟ್ವರ್ಕ್ ಸಮಸ್ಯೆಗಾಗಿ ಜನರೇಟರ್‌ಗೆ ಹೊಸ ಬ್ಯಾಟರಿ ಅಳವಡಿಕೆ, ಡೈನಮ್ ದುರಸ್ತಿ

0

ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಕೊಡುಗೆ

ಕೊಲ್ಲಮೊಗ್ರು ಗ್ರಾಮದಲ್ಲಿ ಕಾಡುತ್ತಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಪರಿಹಾರವಾಗಿದ್ದು, ಟವರ್‌ನ ಪವರ್ ಸಪ್ಲೈಗಾಗಿ ಜನರೇಟರ್‌ಗೆ ಹೊಸ ಬ್ಯಾಟರಿ ಅಳವಡಿಸಿ, ಡೈನಮ್ ಸರಿಪಡಿಸಲಾಗಿದೆ.

ಕೆಲ ಸಮಯದ ಹಿಂದೆ ಕೊಲ್ಲಮೊಗ್ರು ಬಿಎಸ್‌ಎನ್‌ಎಲ್ ಟವರ್ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ನೆಟ್‌ವರ್ಕ್ ಸಮಸ್ಯೆ ಉಂಟಾಗಿತ್ತು. ಜನರೇಟರ್‌ಗೆ ಹೊಸ ಬ್ಯಾಟರಿ ಅಳವಡಿಸಬೇಕಾಗಿತ್ತು, ಈ ಬಗ್ಗೆ ಬಿಎಸ್‌ಎನ್‌ಎಲ್ ನವರಿಗೆ ತಿಳಿಸಿದ್ದರೂ ಅವರು ಹೊಸ ಬ್ಯಾಟರಿ ಅಳವಡಿಸಿರಲಿಲ್ಲ. ಕೊನೆಗೆ ಕೊಲ್ಲಮೊಗ್ರು ಗ್ರಾ.ಪಂ. ಉಪಾಧ್ಯಕ್ಷ ಮಾಧವ ಚಾಂತಾಳ ಅವರು ತನ್ನ ಸದಸ್ಯತ್ವ ಗೌರವಧನದಿಂದ (ರೂ.೬೫೦೦) ಬಿಎಸ್‌ಎನ್‌ಎಲ್ ಟವರ್‌ಗೆ ಹೊಸ ಬ್ಯಾಟರಿ ನೀಡಿದ್ದರು. ಜೊತೆಗೆ ಡೈನಮ್ ಕೂಡ ಹಾಳಾಗಿದ್ದರಿಂದ ಅದನ್ನು ಸರಿಪಡಿಸಲಾಗಿದ್ದು, ಅದರ ವೆಚ್ಚವನ್ನು ಕೊಲ್ಲಮೊಗ್ರು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ಕಟ್ಟ ಅವರು ನೀಡಿ ಸಹಕರಿಸಿದ್ದರು.


ಬಿಎಸ್‌ಎನ್‌ಎಲ್ ಸಿಬ್ಬಂದಿ ಅವರು ಜನರೇಟರ್‌ಗೆ ಹೊಸ ಬ್ಯಾಟರಿ ಅಳವಡಿಸಿ, ಡೈನಮ್ ಸರಿಪಡಿಸಿದರು. ಇದರಿಂದ ಟವರ್‌ನ ಪವರ್ ಸಪ್ಲೈ ಬ್ಯಾಕಪ್ ಬ್ಯಾಟರಿ ಸಮಸ್ಯೆ ಪರಿಹಾರಗೊಂಡಿದೆ.