ಕೆವಿಜಿ ಐಪಿಎಸ್ ನಲ್ಲಿ 2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ

0

ಜಯ ಪರಜಯಗಳು ಕ್ರೀಡೆಯ ಭಾಗ. ಆದರೆ ಪ್ರತಿಯೊಂದು ಸ್ಪರ್ಧೆಯು ನಮ್ಮೊಳಗಿನ ಸಾಮರ್ಥ್ಯವನ್ನು ಹೆಚ್ಚಿಸುವ ಪಾಠವಾಗುತ್ತದೆ : ಮೌರ್ಯ ಆರ್ ಕುರುಂಜಿ

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ2025-26ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಡಿ. 11 ಮತ್ತು 12ರಂದು ಜರಗಿತು. ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ ಶುಭ ಹಾರೈಸಿದರು.
ಕೆವಿಜಿ ಡೆಂಟಲ್ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕ ಮೌರ್ಯ ಆರ್ ಕುರಂಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ವಿದ್ಯಾರ್ಥಿಗಳಿಗೆ ಕ್ರೀಡೆಯ ಮಹತ್ವವನ್ನು ತಿಳಿಸಿದರು. ಕ್ರೀಡೆ ಮಾನವನಲ್ಲಿ ಶಿಸ್ತು, ಸಮನ್ವಯ, ಪರಿಶ್ರಮ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ದೈಹಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಜಯ
ಪರಜಯಗಳು ಕ್ರೀಡೆಯ ಭಾಗ. ಆದರೆ ಪ್ರತಿಯೊಂದು ಸ್ಪರ್ಧೆಯು ನಮ್ಮೊಳಗಿನ ಸಾಮರ್ಥ್ಯವನ್ನು ಹೆಚ್ಚಿಸುವ ಪಾಠವಾಗುತ್ತದೆ ಎಂದು ಹೇಳಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಶುಭ ಹಾರೈಸಿದರು. 9ನೇ ತರಗತಿಯ ಶಾಲಾ ಉಪ ಕ್ರೀಡಾ ಮಂತ್ರಿ ವೀಕ್ಷಿತ್ ಎಲ್ಲಾ ಆಟಗಾರರಿಗೆ ಕ್ರೀಡಾ ಸ್ಪೂರ್ತಿ, ನಿಷ್ಠೆ ಮತ್ತು ಶಿಸ್ತು ಕಾಪಾಡುವಂತೆ ಪ್ರತಿಜ್ಞಾವಿಧಿ ಬೋಧಿಸಿದರು. ಓಟ, ಗುಂಡೆಸೆತ, ಎತ್ತರ ಜಿಗಿತ, ರಿಲೇ ಸೇರಿದಂತೆ ಹಲವು ಸ್ಪರ್ಧೆಗಳು ನಡೆಯಿತು. ಕಾರ್ಯಕ್ರಮದ ಕೊನೆಗೆ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರು ವಿವಿಧ ಕ್ರೀಡೆಗಳನ್ನು ಆಡುವುದರ ಮೂಲಕ ವಿದ್ಯಾರ್ಥಿಗಳಿಗೆ ಮನೋರಂಜನೆ ನೀಡಿದರು.

ಎಲ್ಲಾ ಕಾರ್ಯಕ್ರಮಗಳು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್, ಶ್ರೀಮತಿ ಆಶಾ ಜ್ಯೋತಿ, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಡಾ. ರಾಜೇಶ್, ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನ ಶ್ರೀಮತಿ ಅಕ್ಷತಾ ಇವರ ನಿರ್ದೇಶನದಂತೆ ಜರಗಿತು.

ಈ ಕಾರ್ಯಕ್ರಮವನ್ನು 9ನೇ ತರಗತಿಯ ನಿಧಿ,ಪ್ರಫುಲ್ಲ ಮತ್ತು ಏಳನೇ ತರಗತಿಯ ದ್ವಿತಾ ರಂಜನ್ ಸುಂದರವಾಗಿ ನಿರ್ವಹಿಸಿದರು. ಆಕೃತಿ ಸ್ವಾಗತಿಸಿ ಧನ್ವಿ ರಮಣ್ ವಂದಿಸಿದನು.

ಈ ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ,ಎಲ್ಲಾ ಶಿಕ್ಷಕ – ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.