ಜಯನಗರ: ಗಜಾನನ ಭಜನಾ ಮಂದಿರದ ಸಭಾಭವನಕ್ಕೆ ಧರ್ಮಸ್ಥಳದಿಂದ ಧನಸಹಾಯ

0

ಜಯನಗರದ ಶ್ರೀ ಗಜಾನನ ಭಜನಾ ಮಂದಿರದ ಸಭಾಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಒಂದು ಲಕ್ಷ ರೂಪಾಯಿ ಮೊತ್ತದ ಚೆಕ್ ವಿತರಣೆಯನ್ನು ಡಿ.12 ರಂದು ಸುಳ್ಯ ಯೋಜನಾಧಿಕಾರಿ ಮಾಧವ ಗೌಡರವರು ವಿತರಿಸಿ ಕ್ಷೇತ್ರದ ಇತಿಹಾಸದ ಬಗ್ಗೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಗಜಾನನ ಭಜನಾ ಮಂದಿರದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಧಾಕರ ಕಾಮತ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಸ್ತೂರಿಶಂಕರ್, ಕಾರ್ಯದರ್ಶಿ ಪ್ರಸಾದ್, ಖಜಾಂಜಿ ಸುರೇಂದ್ರ ಕಾಮತ್, ಭಜನಾ ಮಂದಿರದ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಅನುರಾಧ ನಾಗರಾಜ್, ಖಜಾಂಜಿ ಮಾಧವ ಎ., ಭಜನಾ ಸೇವಾ ಸಮಿತಿ ಅಧ್ಯಕ್ಷ ಬಾಲಮುರಳಿ ಕುದ್ಪಾಜೆ, ಕುಸುಮಾಧರ ಕೆ.ಜೆ, ಶಿವನಾಥ ರಾವ್, ನಾಗರಾಜ ಮೇಸ್ತ್ರಿ, ಭಜನಾ ಮಂದಿರದ ಅರ್ಚಕರಾದ ಅನಂತಪ್ರಕಾಶ್ ಹಾಗೂ ಭಕ್ತಾದಿಗಳು, ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.