ಸುಕೋಮಲೆಯರ ಮನ ಸೆಳೆಯಲು ಮತ್ತೆ ಬಂದಿದೆ ಜಿ.ಎಲ್. ಆಚಾರ್ಯ ಗ್ಲೋ ಫೆಸ್ಟ್

0

‘ವಜ್ರಾದಪಿ ಕಠೋರಾಣಿ’ ಎಂಬ ಮಾತಿದೆ. ಅಂದರೆ ಲೋಹಗಳಲ್ಲೇ ವಜ್ರ ಅತ್ಯಂತ ಕಠಿಣವಾದದ್ದು ಎಂಬುದು ಇದರ ಅರ್ಥ. ಆದರೆ ವಿಶೇಷವೆಂದರೆ ಸುಕೋಮಲೆಯಾದ ಸ್ತ್ರೀ ಆಕರ್ಷಕ ವಜ್ರಾಭರಣಗಳನ್ನು ತೊಟ್ಟುಕೊಂಡ ಸಂದರ್ಭದಲ್ಲಿ ಈ ಗಾದೆಗೆ ಒಂದು ಪರಿಪೂರ್ಣತೆ ಸಿಗುತ್ತದೆ. ‘ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’ – ಕುಸುಮದಂತೆ ಮೃದುವಾಗಿರುವ ಸ್ತ್ರೀಯ ಅಂದವನ್ನು ಇನ್ನಷ್ಟು ಇಮ್ಮಡಿಗೊಳಿಸುವುದು ವಜ್ರಾಭರಣಗಳು. ಪ್ರಾಚಿನ ಕಾಲದಿಂದಲೂ ವಜ್ರ ತನ್ನದೇ ಆದ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ. ಇತ್ತೀಚಿನ ದಿನಗಳಲ್ಲಿ ವಜ್ರಾಭರಣಗಳ ಖರೀದಿ ಒಂದು ಟ್ರೆಂಡ್ ಆಗಿ ಬದಲಾಗಿದೆ. ಈ ಟ್ರೆಂಡನ್ನು ಇನ್ನಷ್ಟು ಝಗಮಗಿಸಲು ಬಂದಿದೆ ಜಿ.ಎಲ್. ಆಚಾರ್ಯ ಗ್ಲೋ ಫೆಸ್ಟ್, ವಿನೂತನ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ. ಪುತ್ತೂರು ಸೇರಿದಂತೆ ಹತ್ತೂರಿನಲ್ಲೂ ಚಿನ್ನಾಭರಣ ಮಾರಾಟ ಕ್ಷೇತ್ರದಲ್ಲಿ ವಜ್ರದಂತೆ ಬೆಳಗುತ್ತಿರುವ ಜೆ.ಎಲ್. ಆಚಾರ್ಯ ಜ್ಯುವೆಲ್ಸ್‌ನಲ್ಲಿ ‘ಗ್ಲೋ ಫೆಸ್ಟ್’ ಪ್ರಭೆ ಬೆಳಗಲಿದೆ.
ಹೌದು, ಡಿ.೧೫ ರಂದು ಸುಳ್ಯದ ಮುಖ್ಯರಸ್ತೆಯಲ್ಲಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ವಜ್ರಾಭರಣಗಳ ವಾರ್ಷಿಕ ಮಹೋತ್ಸವ ಪ್ರಾರಂಭಗೊಳ್ಳಲಿದ್ದು, ಜ.೧೫ರ ವರೆಗೆ ಗ್ರಾಹಕರು ತಮಗಿಷ್ಟವಾದ ವಜ್ರಾಭರಣಗಳನ್ನು ಆಫರ್ ಮೂಲಕ ಖರೀದಿಸಬಹುದಾಗಿದೆ.
೧೯೫೭ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿದೆ. ಸುಳ್ಯ ಮಾತ್ರವಲ್ಲದೆ, ಪುತ್ತೂರು, ಮೂಡಬಿದ್ರೆ, ಕುಶಾಲನಗರ ಹಾಗೂ ಹಾಸನದಲ್ಲೂ ಮಳಿಗೆಗಳನ್ನು ಹೊಂದಿದೆ.


ಅಚ್ಚರಿಯ ಕೊಡುಗೆ, ಉಡುಗೊರೆ

ಈ ವಜ್ರಾಭರಣಗಳ ವಾರ್ಷಿಕ ಮಹೋತ್ಸವದ ಪ್ರಯುಕ್ತ ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಯೊಂದಿಗೆ ವಜ್ರಾಭರಣಗಳನ್ನು ಖರೀದಿಸುವ ಸುವರ್ಣಾವಕಾಶ ಗ್ರಾಹಕರದ್ದಾಗಿದೆ. ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೆಟ್‌ಗೆ ೭ ಸಾವಿರದ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ವೈವಿದ್ಯಮಯ ವಜ್ರಾಭರಣಗಳ ವಿನೂತನ ಸಂಗ್ರಹ ೩೫೦೦ ರೂ.ನಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೪೮೨೩೮೩೬೦೬ ಸಂಪರ್ಕಿಸಿ.