ದೇಲಂಪಾಡಿ ಗ್ರಾಮ ಪಂಚಾಯತ್ ಚುನಾವಣೆ

0

ಮೊದಲ ಬಾರಿಗೆ ಬಿಜೆಪಿಗೆ ಭಜ೯ರಿ ಗೆಲುವು

ಗಡಿ ಪ್ರದೇಶವಾದ ದೇಲಂಪಾಡಿ ಪಂಚಾಯತ್ ನ ಮೂರನೇ ವಾಡ್೯ ಬೆಳ್ಳಿಪ್ಪಾಡಿಯಲ್ಲಿ ಬಿಜೆಪಿ ಜಯಗಳಿಸಿದೆ.

ಬಿಜೆಪಿ ಅಭ್ಯರ್ಥಿ ಧನಂಜಯ ಬೆಳ್ಳಿಪ್ಪಾಡಿ ಅವರಿಗೆ 202 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ಧನಂಜಯ ಬೆಳ್ಳಿಪ್ಪಾಡಿ 459 ಪಡೆದರೆ, ಪಕ್ಷೇತರ ಅಭ್ಯರ್ಥಿ ಲೋಹಿತ್ ದೇಲಂಪಾಡಿ 257 ಮತ,
ಕಮ್ಯುನಿಸ್ಟ್ ಅಭ್ಯರ್ಥಿ ರತ್ನಾಕರ ನಾಯರ್ 122 ಮತ ಪಡೆದರು. ಈ ಮೂಲಕ ಬೆಳ್ಳಿಪ್ಪಾಡಿ ವಾಡ್೯ ಬಿಜೆಪಿ ತೆಕ್ಕೆಗೆ ಹಾಕಿಕೊಂಡಿದೆ.