ಪನತ್ತಡಿ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ

0

ಸಿ. ಪಿ. ಐ. ಎಂ 8,
ಕಾಂಗ್ರೆಸ್ 6, ಬಿಜೆಪಿ 3,
ಕಲ್ಲಪಳ್ಳಿ 7 ನೇ ವಾರ್ಡಿನಲ್ಲಿ ಬಿಜೆಪಿಗೆ ಅಭೂತ ಪೂರ್ವ ಗೆಲುವು

ಕಲ್ಲಪಳ್ಳಿ ಪನತ್ತಡಿ ಗ್ರಾಮ ಪಂಚಾಯತ್ ನ ಚುನಾವಣೆ ಯ ಫಲಿತಾಂಶ ಇಂದು ಹೊರಬಿದ್ದಿದ್ದು ಒಟ್ಟು 17 ವಾರ್ಡಿನಲ್ಲಿ ಸಿ. ಪಿ. ಐ. ಎಂ 8 ಸ್ಥಾನ, ಕಾಂಗ್ರೆಸ್ 6 ಸ್ಥಾನ, ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ಕಲ್ಲಪಳ್ಳಿ ಗಡಿ ಭಾಗದ 7 ನೇ ವಾರ್ಡಿನಲ್ಲಿ ಮಹಿಳಾ ಸಾಮಾನ್ಯ ಕ್ಷೇತ್ರದಿಂದ 3 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಯಿಂದ ಭವ್ಯ ಜಯರಾಜ್ ಪಾಡಿಕೊಚ್ಚಿ 591 ಮತಗಳನ್ನು ಪಡೆದು ಪ್ರತಿಸ್ಪರ್ಧಿಸಿ. ಪಿ. ಐ. ಎಂ ನ ನಳಿನಾಕ್ಷಿ ದಾಮೋದರ ಪನೆಯಾಲ ರ ವಿರುದ್ದ 173 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಪಕ್ಷ ದ ಅಭ್ಯರ್ಥಿ ಸಿಂಧೂ ಜಾರ್ಜ್ ರವರು 36 ಮತ ಗಳನ್ನು ಪಡೆದು ಪರಾ ಭವಗೊಂಡಿದ್ದಾರೆ.
ಈ ಹಿಂದೆ ಪನತ್ತಡಿ ಪಂಚಾಯತ್ ನಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಮಾತ್ರ ಗಳಿಸಿಕೊಂಡಿತ್ತು. ಕಳೆದ ಅವಧಿಯಲ್ಲಿ ಕೇವಲ ಒಂದು ಮತದ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ನಂದಕುಮಾರ್ ರವರು ಸೋಲುಂಡಿದ್ದರು. ಈ ಬಾರಿ 3 ಸ್ಥಾನಗಳನ್ನು ಗಳಿಸಿಕೊಂಡಿದ್ದು ಉಪಾಧ್ಯಕ್ಷ ಸ್ಥಾನ ಬಿಜೆಪಿಗೆ ಲಭಿಸುವ ಸಾಧ್ಯತೆ ಇದೆಯೆಂದು ತಿಳಿದು ಬಂದಿದೆ.