ಅಕ್ಷಯ ಯುವಕ ಮಂಡಲ ನೆಟ್ಟಾರು ,ಅಕ್ಷತಾ ಮಹಿಳಾ ಮಂಡಲ ನೆಟ್ಟಾರು ಹಾಗೂ ದ.ಕ.ಜಿ.ಪಂ.ಸ.ಹಿ.ಪ್ರಾ.ಶಾಲೆ ನೆಟ್ಟಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ವಾರ್ಷಿಕೋತ್ಸವ ಹಾಗೂ ಬೆಳ್ಳಿಹಬ್ಬ ಸಂಭ್ರಮ *ಅಕ್ಷಯ ಪಥ ಕಾರ್ಯಕ್ರಮವು ಜ.03 ಮತ್ತು ಜ.04 ರಂದು ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆಯು ಡಿ.13 ರಂದು ನೆಟ್ಟಾರು ಶಾಲೆಯಲ್ಲಿ ನಡೆಯಿತು.










ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನ ವಿಭಾಗ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಶ್ರೀ ಪದ್ಮನಾಭ ಕೆ ನೆಟ್ಟಾರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅಕ್ಷಯ ಯುವಕ ಮಂಡಲದ ಅಧ್ಯಕ್ಷ ಶ್ರೀ ಭಾಸ್ಕರ ನೆಟ್ಟಾರು,ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ಶ್ರೀ ವಸಂತ ನೆಟ್ಟಾರು,ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕಿ ಶ್ರೀಮತಿ ವಿಶಾಲಾಕ್ಷಿ, ಶಾಲಾ ಮುಖ್ಯ ಗುರುಗಳಾದ
ಶ್ರೀಮತಿ ನಳಿನಾಕ್ಷಿ , ಶಿಕ್ಷಕರಾದ ಕು. ಅಶ್ವಿನಿ,ಶ್ರೀಮತಿ ಮಧುರಾ, ಶ್ರೀಮತಿ ಪೂರ್ಣಿಮಾ, ಭವ್ಯ, ಕು. ಮಾಳವಿಕ, ಅಕ್ಷಯ ಯುವಕ ಮಂಡಲದ ಸದಸ್ಯರಾದ ಬಾಲಕೃಷ್ಣ ನೆಟ್ಟಾರು, ಚಂದ್ರಶೇಖರ ಮೊಗಪ್ಪೆ, ಪ್ರತೀಕ್ ಮೊಗಪ್ಪೆ,ಲೋಕೇಶ್ ಕೋಡಿಬೈಲು, ವೆಂಕಟರಮಣ, ದಿವಾಕರ ಕಜೆ, ಪ್ರವೀಣ್,ಸ್ಥಾಪಕ ಅಧ್ಯಕ್ಷರಾದ ದೇವದಾಸ್ ನೆಟ್ಟಾರು, ಶಾಲಾ ನಾಯಕ ಹೇಮಂತ್, ಶ್ರೀಜಿತ್ ರೈ,ಸುದ್ದಿ ಪತ್ರಿಕೆ ವರದಿಗಾರ ಗಣೇಶ್ ಕುಕ್ಕುದಡಿ ಹಾಗೂ ಶಾಲಾ ವಿದ್ಯಾರ್ಥಿಗಳು ,ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಶೈಲೇಶ್ ನೆಟ್ಟಾರು ಸ್ವಾಗತಿಸಿ,ವಂದಿಸಿದರು.










