
ಕರ್ನಾಟಕ ಆಗ್ರೋ ಕೆಮಿಕಲ್ಸ್ ( ಮಲ್ಟಿ ಪ್ಲೆಕ್ಸ್ ) ಬೆಂಗಳೂರು ಮತ್ತು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಹಾಗೂ ಕರಾವಳಿ ಎಂಟರ್‌ಪ್ರೈಸೆಸ್ ಸುಳ್ಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಿ. ೯ ರಂದು ಸಂಘದ ಸಭಾಭವನದಲ್ಲಿ ಸಮಗ್ರ ಕೃಷಿ ಕಾರ್ಯಗಾರ ನಡೆಯಿತು.
ಸಂಘದ ಅಧ್ಯಕ್ಷ ವಸಂತ ನಡುಬೈಲು ಅಧ್ಯಕ್ಷತೆ ವಹಿಸಿದ್ದರು. ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಸುಳ್ಯ ಕರಾವಳಿ ಎಂಟರ್‌ಪ್ರೈಸೆಸ್ ಮಾಲಕ ಚೆನ್ನಪ್ಪ ಗೌಡ ಕುಕ್ಕುಜೆ ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿದ್ದರು.









ಎಲೆ ಚುಕ್ಕಿ ರೋಗ, ಅಡಿಕೆ, ಹಳದಿ ರೋಗ, ಹಾಗೂ ಕಾಫಿ ಬೆಳೆಯ ಕ್ರಮ, ರೋಗ ಕೀಟಗಳ ನಿರ್ವಹಣೆಯ ಬಗ್ಗೆ, ಕರ್ನಾಟಕ ಆಗ್ರೋ ಕೆಮಿಕಲ್ಸ್ ಬೆಂಗಳೂರು ಮಾರುಕಟ್ಟೆ ಮತ್ತು ತಾಂತ್ರಿಕ ಮುಖ್ಯಸ್ಥರಾದ ಡಾ. ಎಮ್.ಎನ್. ನಾರಾಯಣ ಸ್ವಾಮಿಯವರು ಅಡಿಕೆ ಎಲೆಚುಕ್ಕಿ ರೋಗ, ಹಳದಿ ರೋಗ, ಹಾಗೂ ಕಾಫಿ ಕೃಷಿ ಬೆಳೆ ಬೇಸಾಯದ ಬಗ್ಗೆ, ಕೀಟ ರೋಗಗಳ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿ ಕೊಟ್ಟರು.
ಸಂಘದ ಮಾಜಿ ಅಧ್ಯಕ್ಷರುಗಳಾದ ರೂಪರಾಜ ರೈ, ವಸಂತ ಹುದೇರಿ, ಕುಸುಮವತಿ ರೈ ಎಣ್ಮೂರು ಗುತ್ತು, ಸಂಘದ ನಿರ್ದೇಶಕರುಗಳಾದ, ನೇಮೀಶ ಕಡೀರ, ಶಿವರಾಮ ಚಾಮೆತಡ್ಕ,, ಸುಧಾರಾಣಿ ಕಡೀರ, ನವ್ಯಶ್ರೀ ಅಲೆಂಗಾರ,, ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಮಂಗಳೂರು ಜನತಾ ಬಜಾರ್ ಅಧ್ಯಕ್ಷರಾದ ಪ್ರಸನ್ನ ಕೆ., ನಿವೃತ್ತ ಪ್ರಾಚಾರ್ಯ ಜಯಾರಾಜ್ ಆಚಾರ್ಯ ಕಳತ್ತಜೆ, ರಾಮಕೃಷ್ಣ ಭಟ್ ಕಳತ್ತಜೆ, ಶ್ರೀರಾಜಾ ಭಟ್ ಅಲೆಂಗಾರ, ಉಮೇಶ್ ಅಲೆಂಗಾರ, ಶ್ರೀಮತಿ ಮಧು ಪಿ. ಆರ್., ಸಂಘದ ಸಿಬ್ಬಂದಿಗಳು, ಕೃಷಿಕ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಸಂಘದ ಕಾರ್ಯನಿರ್ವಾಹಣಾಧಿಕಾರಿ ಚಿದಾನಂದ ರೈ ಸ್ವಾಗತಿಸಿ ನಿರೂಪಿಸಿ, ವಂದಿಸಿದರು.










