ಸುಳ್ಯ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ

0

ಗ್ರಂಥಾಲಯಕ್ಕೆ ಹೊಸ ಕಪಾಟು ಕೊಡುಗೆ

ಜಿಲ್ಲಾ ಕೇಂದ್ರ ಗ್ರಂಥಾಲಯ, ಮಂಗಳೂರು ಇದರ ಸುಳ್ಯ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಯಿತು.

ಆಗಸ್ಟ್ 12ರಂದು ಗ್ರಂಥಾಲಯ ವಿಜ್ಞಾನ ಪಿತಾಮಹ, ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಜನ್ಮದಿನವಾಗಿದ್ದು, ಅದೇ ದಿನ ರಾಷ್ಟ್ರೀಯ ಗ್ರಂಥಪಾಲಕರ ದಿನ ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ.ವಿ.ಕೇಶವ ಭಟ್ ಅವರು ದೀಪ ಬೆಳಗಿಸಿ, ಡಾ. ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿ, “ನನಗೆ ಗ್ರಂಥಾಲಯ ಎರಡನೇ ಮನೆ ಇದ್ದಂತೆ. ಇಲ್ಲಿ ಸಾವಿರಾರು ಪುಸ್ತಕಗಳು ಇದ್ದು, ಸಾರ್ವಜನಿಕರು, ಯುವಜನತೆ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು”ಎಂದು ಸಲಹೆ ನೀಡಿದರು.

ಇದೇ ವೇಳೆ ವಿ. ಕೇಶವ ಭಟ್ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸಿಡಲು ಅಗತ್ಯವಾಗಿ ಬೇಕಾಗಿದ್ದ ಕಬ್ಬಿಣದ ಕಪಾಟು ಒಂದನ್ನು ಕೊಡುಗೆಯಾಗಿ ನೀಡಿದರು.

ಗ್ರಂಥಪಾಲಕಿ ವಾರಿಜಾ ಎ. ನೀರಬಿದಿರೆ, ಸಿಬ್ಬಂದಿಗಳಾದ ಪ್ರಶಾಂತ್, ಚಂದ್ರಶೇಖರ ಕೈಪಡ್ಕ ಮತ್ತಿತರರು ಇದ್ದರು.