ಎಲಿಮಲೆ : ಪಂಜಿನ ಮೆರವಣಿಗೆ

0

ವಿಶ್ವ ಹಿಂದೂ ಪರಿಷದ್ ಭಜರಂಗ ದಳ, ದುರ್ಗಾ ವಾಹಿನಿ ಮಾತೃ ಶಕ್ತಿ ಅಯೋದ್ಯೆ ಘಟಕ ಎಲಿಮಲೆ ಇದರ ನೇತೃತ್ವದಲ್ಲಿ ಪಂಜಿನ ಮೆರವಣಿಗೆಯು ಆ. 13ರಂದು ಸಂಜೆ ಗಂಟೆ 6.30ಕ್ಕೆ ಎಲಿಮಲೆಯ ಮೇಲಿನ ಪೇಟೆಯಲ್ಲಿ ನಡೆಯಿತು.

ಕರ್ನಾಟಕ ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ, ಹಿರಿಯರಾದ ಎ. ವಿ ತೀರ್ಥರಾಮ ಪಂಜು ಉರಿಸುವುದರ ಮೂಲಕ ಚಾಲನೆ ನೀಡಿದರು.

ಮೆರವಣಿಗೆ ಎಳಿಮಲೆಯ ಮೇಲಿನ ಪೇಟೆಯಿಂದ ಪ್ರಾರಂಭಗೊಂಡು ಕೆಳಗಿನ ಪೇಟೆಗೆ ಸಾಗಿ ಮೇಲಿನ ಪೇಟೆ ತನಕ ನಡೆಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆಯನ್ನು ಘಟಕದ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರಾದ ಭೋಜಪ್ಪ ಗೌಡ ವಹಿಸಿದರು. ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಶೆಟ್ಟಿ ಮೇನಾಲ ಸಂಕಲ್ಪ ದಿನದ ಹಾಗೂ ಪಂಜಿನ ಮೆರವಣಿಗೆಯ ಮಹತ್ವ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ ಯೋಧರಾದ ಗಂಗಾಧರ್ ಮೊಟ್ಟೆ, ರಾಷ್ಟೀಯ ಸ್ವಯಂ ಸೇವಕ ಸಂಘ ಸುಳ್ಯ ತಾಲೂಕು ಸಂಘ ಚಾಲಕರಾದ ಚಂದ್ರಶೇಖರ ತಳೂರು, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡ ಕಾರ್ಯದರ್ಶಿಯಾದ ನವೀನ್ ಎಲಿಮಲೆ, ದುರ್ಗಾವಾಹಿನಿ ಸoಯೋಜಕರಾದ ಜಯಂತಿ ಎಲಿಮಲೆ, ಮಾತೃ ಶಕ್ತಿ ಸoಯೋಜಕರಾದ ಶಶಿಕಲಾ ಕಾಡುಜಬಳೆ, ಭಜರಂಗ ದಳ ಸoಯೋಜಕರಾದ ಪ್ರಶಾಂತ್ ಅಂಬೇಕಲ್ಲು ಇವರು ಉಪಸ್ಥಿತರಿದ್ದರು.

ಲಿಖಿನ್ ಸುಳ್ಳಿ ಸ್ವಾಗತಿಸಿ ಕುಲದೀಪ್ ಧನ್ಯವಾದ ಮಾಡಿದರು. ಉದಯ ಚಳ್ಳ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಗುಡ್ಡನಮನೆ ಹಾಗೂ ಚಲನ ಗುಡ್ಡೆ ವಂದೇ ಮಾತರಂ ಹಾಡಿದರು.