ಸುಳ್ಯ ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳಲ್ಲಿ ರಚನೆಯಾಗಿರುವ ಹಿರಿಯ ವಿದ್ಯಾರ್ಥಿ ಸಂಘಗಳ ಪ್ರತಿನಿಧಿಗಳಿಗೆ ಆ. ೧೨ ರಂದು ತಾಲೂಕು ಪಂಚಾಯತ್ ಸಾಮಾರ್ಥ್ಯ ಸೌಧದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ನೇತೃತ್ವದಲ್ಲಿ ಓರಿಯಂಟೇಶನ್ ಕಾರ್ಯಕ್ರಮ ನಡೆಸಲಾಯಿತು.















ವಿದ್ಯಾರ್ಥಿ ಸಂಘದ ರಚನೆಯ ಉದ್ದೇಶವನ್ನು ಪ್ರಸ್ತಾವಿಕವಾಗಿ ಶ್ರೀಮತಿ ಶೈಲಜಾ ಬಿ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದರು. ಯೋಜನೆಯ ಉದ್ದೇಶ ಮತ್ತು ಸೇವೆಗಳ ಬಗ್ಗೆ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ ಪಿ. ಇವರು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುವ ಸೇವೆಗಳನ್ನು ಉತ್ತಮಗೊಳಿಸುವ ಕುರಿತು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೊಳಿಸಲು ಅನುದಾನದ ಕ್ರೂಢೀಕರಣ ಕುರಿತು ಆರೋಗ್ಯಕರ ಚರ್ಚೆ ನಡೆಸಲಾಯತು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಕೇರ್ಪಳ, ದೀಪಕ್ ಕೆ.ಎಸ್. ಬಾರ್ಪಣೆ, ತೀರ್ಥರಾಮ ಕೆ.ಎಂ. ದುಗ್ಗಲಡ್ಕ, ಚೈತನ್ಯ ವಳಲಂಬೆ, ಗೌತಮಿ ಕೇರ್ಪಳ, ರಾಜೇಶ್ವರಿ ಅಮೈಮಡಿಯಾರು, ನಿರಂಜನ ಎಂ.ಸಿ. ಸೋಣಂಗೇರಿ, ಹೇಮಪ್ರಕಾಶ್ ಎಂ. ಕೇರ್ಪಳ, ಚಂದ್ರಶೇಖರ ಕೆ. ಕೇರ್ಪಳ, ಸಂದೀಪ್ ಅಡ್ಪಂಗಾಯ, ವಿನೋದ್ ಎಂ.ಎಸ್.ಅಡ್ಪಂಗಾಯ, ಪ್ರದೀಪ್ ಕುಮಾರ್ ಕೊಲ್ಲಮೊಗ್ರು, ಜಿತೇಶ್ ಕೆ. ಕೇರ್ಪಳ, ಕವಿನಾ ರೆಂಜಾಳ, ಲತೇಶ್ ಡಿ.ಡೀವಗಡ್ಡಿ, ಅಬ್ಬಾಸ್ ಎ.ಪಿ. ಅಡ್ಪಂಗಾಯ, ಜೀವನ್ ಕೆ.ಕಲ್ಮಡ್ಕ, ಶ್ರವಣ್ ಕೆ.ಕಲ್ಮಡ್ಕ ಇವರು ಭಾಗವಹಿಸಿದ್ದರು, ಅಂಗನವಾಡಿ ಕಾರ್ಯಕರ್ತೆಯರಾದ ಶೋಭಾವತಿ, ಭಾಗೀರಥಿ, ರಾಧ ಎ.ಪಿ., ಶೋಭಾ ಎನ್, ಪುಷ್ಪಾವತಿ, ಕು|ಲತಾ ಅಂಬೆಕಲ್ಲು, ನಿವೇದಿತಾ, ಕಮಲ ಎಂ, ರತ್ನಾವತಿ ರೆಂಜಾಳ, ನಳಿನಿ ರೈ ಕಲ್ಮಡ್ಕ, ಇವರು ಭಾಗವಹಿಸಿದ್ದರು. ಮೇಲ್ವಿಚಾರಕಿ ಶ್ರೀಮತಿ ವಿಜಯ ಜೆ.ಡಿ. ಇವರು ಸ್ವಾಗತಿಸಿ, ಮೇಲ್ವಿಚಾರಕಿ ಶ್ರೀಮತಿ ಉಷಾ ಎಂ. ಇವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಛೇರಿಯ ಸಿಬ್ಬಂದಿಗಳಾದ ಶ್ರೀಮತಿ ಮಲ್ಲಿಕಾ ಮತ್ತು ಕು|ಶೋಭಿತಾ ರವರು ತಾಂತ್ರಿಕ ಸಹಕಾರ ನೀಡಿದರು.










