ಅರಂತೋಡು ಗ್ರಾ.ಪಂನಲ್ಲಿ ಸ್ವಾತಂತ್ಯ್ರ ದಿನಾಚರಣೆ ಆಚರಣೆ

0

ಕೇಸರಿ, ಬಿಳಿ, ಹಸಿರು ಬಣ್ಣಗಳ ಬಲೂನ್‌ನಿಂದ ಕಣ್ಮನ ಸೆಳೆದ ಪಂಚಾಯತ್

ಅರಂತೋಡು ಗ್ರಾಮ ಪಂಚಾಯತ್‌ನಲ್ಲಿ ಸ್ವತಂತ್ರ ಭಾರತದ 79 ನೇ ಸ್ವಾತಂತ್ಯ ದಿನಾಚರಣೆ ಆಚರಿಸಲಾಯಿತು. ಈ ಪ್ರಯುಕ್ತ ‘ನೀರು ಮತ್ತು ನೈರ್ಮಲ ಕುರಿತು ಅರಿವು ಮೂಡಿಸುವ ಸಲುವಾಗಿ ‘ಹರ್ ಘರ್ ತಿರಂಗ ಹರ್ ಘರ್ ಸ್ವಚ್ಛತಾ” ದೊಂದಿಗೆ ಸ್ವಾತಂತ್ರ‍್ಯ ವನ್ನು ಅರಂತೋಡು ಗ್ರಾಮ ಪಂಚಾಯತ್ ವಠಾರ ದಲ್ಲಿ ನಡೆಸಲಾಯಿತು.

ಧ್ವಜಾರೋಹಣ ವನ್ನು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ನೆರವೇರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು ನಾಡಿನ ಗಣ್ಯರು ಭಾಗವಹಿಸಿದರು. ಬಳಿಕ ಪ್ರತಿಜ್ಞಾವನ್ನು ಪಿಡಿಒ ಜಯಪ್ರಕಾಶ್ ಭೋದಿಸಿದರು. ಪಂಚಾಯತ್ ಆವರಣ ಕೇಸರಿ, ಬಿಳಿ, ಹಸಿರು ಬಣ್ಣಗಳ ಬಲೂನ್‌ನಿಂದ ಕಣ್ಮನ ಸೆಳೆಯುತ್ತಿತ್ತು.