ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ನಲ್ಲಿ ಗ್ರ್ಯಾಂಡ್ ಅಸೆಂಬ್ಲಿ ಸ್ವಾತಂತ್ರ್ಯ ದಿನಾಚರಣೆ

0

ಸುಳ್ಯದ ಅನ್ಸಾರಿಯಾ ಎಜುಕೇಶನ್ ಸೆಂಟರ್ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗ್ರ್ಯಾಂಡ್ ಅಸೆಂಬ್ಲಿ ಕಾರ್ಯಕ್ರಮ ವಿಜೃಂಭಣೆಯಿಂದ ಆ.15 ರಂದು ಆಚರಿಸಲಾಯಿತು.

ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.
.
ಅನ್ಸಾರಿಯಾ ಸಮಿತಿ ಉಪಾಧ್ಯಕ್ಷರಾದ ಇಕ್ಬಾಲ್ ಎಲಿಮಲೆ, ನಿರ್ದೇಶಕರಾದ ಹಾಜಿ ಪಿ.ಎ ಮಹಮ್ಮದ್, ಶಾಫಿ ಕುತ್ತಮೊಟ್ಟೆ, ಅನ್ಸಾರಿಯಾ ಜಿಸಿಸಿ
ಕಾರ್ಯದರ್ಶಿ ರವೂಪ್ ಪ್ಯಾನ್ಸಿ ಶುಭ ಹಾರೈಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಏರ್ಪಡಿಸಿದ ಸ್ಪರ್ಧಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನವನ್ನು ಉಪಾಧ್ಯಕ್ಷರಾದ ಎಸ್ ಪಿ ಅಬೂಭಕ್ಕರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಲತೀಫ್ ಹರ್ಲಡ್ಕ,ನಿರ್ದೇಶಕರಾದ ಕೆ ಬಿ ಇಬ್ರಾಹಿಂ,ಇಕ್ಬಾಲ್ ಬೋರುಗುಡ್ಡೆ, ಅಜೀಜ್ ಎಂ ಟಿ,ಸಿದ್ದೀಕ್ ಕಟ್ಟೆಕ್ಕಾರ್,ಶಹೀದ್ ಪಾರೆ ,ವಿತರಿಸಿದರು.

ಈ ಸಂದರ್ಭದಲ್ಲಿ ಅನ್ಸಾರಿಯಾ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ, ಖತೀಬರಾದ ಹಾಪೀಳ್ ಹಾಮೀದ್ ಸಖಾಫಿ, ಸಯ್ಯದ್ ಹುಸೈನ್ ತಂಙಳ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ದನ್ಯವಾದ ಸಮರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಅನ್ಸಾರಿಯಾ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದರು.