ನಾಳೆ (ಆ.17) ರಂದು ಸುಬ್ರಹ್ಮಣ್ಯದಲ್ಲಿ 21ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ಸಾಂಪ್ರದಾಯಿಕ ಅಟ್ಟಿ ಮಡಕೆ

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ, ಸುಬ್ರಹ್ಮಣ್ಯ ಇದರ ಪ್ರಯುಕ್ತ 21ನೇ ವರ್ಷದ
ಮೊಸರು ಕುಡಿಕೆ ಉತ್ಸವ ಆ.17 ರಂದು ಸವಾರಿ ಮಂಟಪ ಸುಬ್ರಹ್ಮಣ್ಯ ಇಲ್ಲಿ ನಡೆಯಲಿದೆ.

ಆ ಪ್ರಯುಕ್ತ ಎಲ್.ಕೆ.ಜಿ., ಯು.ಕೆ.ಜಿ ಮತ್ತು ಅಂಗನವಾಡಿ ಮಕ್ಕಳಿಗೆ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ಜಾರುವ ಕಂಬ ಏರುವ ಸ್ಪರ್ಧೆ
ನಡೆಯಲಿದೆ. ಅಲ್ಲದೆ ಸಂಜೆ ಗಂಟೆ 5:00ಕ್ಕೆ
ಅಟ್ಟಿ ಮೆಡಕೆ ಸ್ಪರ್ಧೆ ನಡೆಯಲಿದೆ.
ಬೆಳಗ್ಗೆ ಸ.ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಾಯ ಮಾದವ ಮೂಕಮಲೆ ಕಾರ್ಯಕ್ರಮ ಉದ್ಘಾಟಿಸಿಲಿದ್ದಾರೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಸುಬ್ರಹ್ಮಣ್ಯ ಮಾನಾಡು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿ ಇರಲಿದ್ದು, ಯಶವಂತ ರೈ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸನ್ಮಾನ ಕಾರ್ಯಕ್ರಮ ನೆರವೇರಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ.