ಅರಂತೋಡು : ಕೊಡಂಕೇರಿಯಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

0

ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿ ಕೊಡಂಕೇರಿ
ಇದರ ಆಶ್ರಯದಲ್ಲಿ ಆ.17 ರಂದು ದ್ವಿತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮವ ನಡೆಯಿತು.
ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.


ಉದ್ಘಾಟಕರಾಗಿ ತೀರ್ಥರಾಮ ಅಡ್ಕಬಳೆ ಅಧ್ಯಕ್ಷರು ದುರ್ಗಾ ಮಾತ ಭಜನಾ ಮಂದಿರ ಅರಂತೋಡು ಇವರು ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿ ಕೊಡಂಕೇರಿ ಇದರ ಅಧ್ಯಕ್ಷರಾದ ಚೇತನ್ ಕೊಡಂಕೇರಿ ಇವರು ಹಾಗೂ ಸಮಿತಿಯ ಕಾರ್ಯದರ್ಶಿಗಳಾದ ಭಾನುಪ್ರಕಾಶ್ ಕೊಡಂಕೇರಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಶ್ರೇಯರವರು ಪ್ರಾರ್ಥನೆಗೈದು ವಾರ್ಷಿಕ ವರದಿ ಮಂಡಿಸಿದರು.


ಸ್ವಾಗತವನ್ನು ಕಾರ್ಯದರ್ಶಿಗಳು ನೆರವೇರಿಸಿ ಕೊಟ್ಟರು. ತೀರ್ಥರಾಮ ಅಡ್ಕಬಳೆಯವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿ ಶುಭ ಹಾರೈಸಿದರು ಹಾಗೂ ಕೇಶವ ಅಡ್ತಲೆಯವರು ಕಾರ್ಯಕ್ರಮದ ಅಧ್ಯಕ್ಷೀಯ ನೆಲೆಯಲ್ಲಿ ಪ್ರೋತ್ಸಾಹಕ ಮಾತುಗಳ ನಾಡಿ ಎಲ್ಲರಿಗೂ ಶುಭ ಹಾರೈಸಿದರು. ಸಮಿತಿ ಅಧ್ಯಕ್ಷರಾದ ಚೇತನ್ ರವರು ವಂದಿಸಿದರು.


ನಂತರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಪುಟಾಣಿಗಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಅರಂತೋಡು ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀಮತಿ ಭವಾನಿ ಚಿಟ್ಟನೂರು ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಚಿದಾನಂದ ನಿವೃತ್ತ ಶಿಕ್ಷಕರು ಗೂನಡ್ಕ , ಸೋಮಶೇಖರ ಪೈಕ ಅದ್ಯಕ್ಷರು ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಹಾಗೂ ಸಮಿತಿಯ ಉಪಾಧ್ಯಕ್ಷರಾದ ನವೀನ್ ಕೊಡಂಕೇರಿ ಇವರು ಉಪಸ್ಥಿತರಿದ್ದರು.

ವಿಶೇಷವಾಗಿ ಅರಂತೋಡು ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗೋಪಾಲ ಕಾಟೂರು, ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕುಮಾರಿ ದೀಕ್ಷಾ , ಪಿ.ಯು.ಸಿ ಯಲ್ಲಿ ಅತ್ಯಧಿಕ ಅಂಕಗಳಿಸಿದ ಕುಮಾರಿ ಸುಶ್ಮಿತಾ ಕುಲ್ಚಾರು , ಪದವಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿನ್ಯಾಸ್ ಪೆತ್ತಾಜೆ ಇವರಿಗೆ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಭವಾನಿ ಚಿಟ್ಟನ್ನೂರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾದ ಚಿದಾನಂದ ಮಾಸ್ತರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಕೃಷ್ಣನ ಕುರಿತಾದ ಮಾಹಿತಿ ಹಾಗೂ ಸಂದೇಶವನ್ನು ತಿಳಿಸಿದರು. ಸೋಮಶೇಖರ ಪೈಕ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಪವನ್ ಕುಮಾರ್ ಕೇನಾಜೆ ನಿರೂಪಿಸಿ ಭಾನುಪ್ರಕಾಶ್ ಸ್ವಾಗತಿಸಿ,ನಿಖಿತಾ ಭಾನುಪ್ರಕಾಶ್ ವಂದಿಸಿದರು.