ಹಲವು ಕಟ್ಟಡಗಳಿಗೆ ಹಾನಿ

ಎಡಮಂಗಲ ಪೇಟೆಯಲ್ಲಿ ಇಂದು (ಆ. 19) ಮುಂಜಾನೆ ಬೀಸಿದ ಭೀಕರ ಗಾಳಿಗೆ ಹಲವು ಕಟ್ಟಡಗಳಿಗೆ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ.








ಸುದ್ದಿ ಏಜೆಂಟ್ ಉಮೇಶ್ ಕಜೆಯವರ ಅಂಗಡಿಯ ಮುಂಭಾಗದ ಶೀಟ್ ಹಾರಿಹೋಗಿದೆ. ಎಡಮಂಗಲ ಸಹಕಾರಿ ಸಂಘದ ಮಾಡಿನ ಶೀಟ್ ಗೆ ಮತ್ತು ಇತರ ವಸ್ತುಗಳಿಗೆ ಹಾನಿಯಾಗಿದೆ.

ಎಡಮಂಗಲ ಪಂಚಾಯತ್ ನ ಕಟ್ಟಡಕ್ಕೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ. ಸವಿತಾ ಮುಳ್ಯ ಎಂಬವರ ಮನೆಯ ಹಂಚುಗಳಿಗೂ ಹಾನಿಯಾಗಿರುವುದಾಗಿ ತಿಳಿದುಬಂದಿದೆ.










