ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ಪೂರ್ಣಿಮಾ ಕೊಂಡೆಪ್ಪಾಡಿ,ಕಾರ್ಯದರ್ಶಿ ಸವಿತಾ ಬಿ.ಆಯ್ಕೆ















ಪೆರುವಾಜೆ ಶ್ರೀ ಜಲದುರ್ಗಾದೇವಿ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಲೆಕ್ಕಪತ್ರ ಮಂಡನೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆಯು ಆ.18 ರಂದು ಪೆರುವಾಜೆ ಜೆ.ಡಿ.ಅಡಿಟೋರಿಯಂ ನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳನ್ನು ಗೌರವಾಧ್ಯಕ್ಷರುಗಳಾದ ಸುನಿಲ್ ರೈ ಮತ್ತು ಪಿ.ಪದ್ಮನಾಭ ಶೆಟ್ಟಿ ಪೆರುವಾಜೆ ಇವರು ಚೀಟಿ ಎತ್ತುವುದರ ಮೂಲಕ ಆಯ್ಕೆ ಮಾಡಿದರು.
ಅಧ್ಯಕ್ಷರಾಗಿ ಪೂರ್ಣಿಮಾ ಕೊಂಡೆಪ್ಪಾಡಿ,ಉಪಾಧ್ಯಕ್ಷರಾಗಿ ಸುಜಾತ ಪಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸವಿತಾ ಬಿ, ಜೊತೆಕಾರ್ಯದರ್ಶಿಯಾಗಿ ಪೂರ್ಣಿಮಾ ಎಂ, ಖಜಾಂಚಿಯಾಗಿ ಸುಶೀಲ ಪೆರುವಾಜೆ ಆಯ್ಕೆಯಾದರು.
ಸಮಿತಿಯ ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷೆ ಶ್ರೀಮತಿ ಅನುಸೂಯ ಇವರು ಪುಸ್ತಕಗಳನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀಮತಿ ವನಿತಾ ಸಾರಕರೆ,ಕಾರ್ಯದರ್ಶಿ ರೇಣುಕಾ,ಖಜಾಂಚಿ ದಿವ್ಯಲತಾ ಸದಸ್ಯರುಗಳಾದ ವಾಣಿಶ್ರೀ,ನಿರ್ಮಲ ರೈ, ಚಂದ್ರಕಲಾ ಉಪಸ್ಥಿತರಿದ್ದರು.










