ಗಾಯಗೊಂಡ ಪ್ರಯಾಣಿಕರು- ಆಸ್ಪತ್ರೆಗೆ ದಾಖಲು
ಅಲೆಟ್ಟಿ ರಸ್ತೆಯಲ್ಲಿ ನಾಗಪಟ್ಟಣ ಸೇತುವೆಯ ಬಳಿ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಇದೀಗ ವರದಿಯಾಗಿದೆ.















ಸುಳ್ಯದಿಂದ ಅಲೆಟ್ಟಿ ಕಡೆಗೆ ಸಂಚರಿಸುತಿದ್ದ ಆಟೋ ರಿಕ್ಷಾ ನಾಗಪಟ್ಟಣ ಸೇತುವೆ ಬಳಿ ತಲುಪುತ್ತಿದ್ದಂತೆ ನಿಯಂತ್ರಣ ಕಳೆದು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಯಿತು. ರಿಕ್ಷಾದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 5 ಮಂದಿ ಮಹಿಳಾ ಪ್ರಯಾಣಿಕರಿದ್ದು ಅವರು ಗಾಯಗೊಂಡರು.
ಅದೇ ಸಮಯದಲ್ಲಿ ಸುಳ್ಯದಿಂದ ಹೋಗುತ್ತಿದ್ದ ಶ್ರೀಧರ ಕೊಯಿಂಗಾಜೆ ಮತ್ತು ರವಿ ಬಾರ್ಪಣೆ ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಕೆರೆ ತಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು. ಆಟೋ ಚಾಲಕ ಅಲ್ಪ ಸ್ವಲ್ಪ
ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಆಟೋ ರಿಕ್ಷಾ ಸಂಪೂರ್ಣವಾಗಿ ಜಖಂಗೊಂಡಿದೆ.










