ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಸುಳ್ಯ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟ ಆರಂಭವಾಗಿದೆ.















ಕಾರ್ಯಕ್ರಮದ ಉದ್ಘಾಟನೆಯನ್ನು ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಅವರು ದೀಪ ಪ್ರಜ್ವಲನಗೊಳಿಸುವ ಮೂಲಕ ಉದ್ಘಾಟಿಸಿ ಕ್ರೀಡಾಳು ಗಳಿಗೆ ಶುಭ ಹಾರೈಸಿದರು.

ಸುಳ್ಯ ತಾಲೂಕು ಕ್ರೀಡಾ ಪರಿವಿಕ್ಷಣಾಧಿಕಾರಿ ಸೂಫಿ ಪೆರಾಜೆ ಯವರು ಶೈಕ್ಷಣಿಕ ವರ್ಷದಲ್ಲಿ ಪ್ರಸ್ತುತ ಕ್ರೀಡಾಕೂಟಗಳ ನೀತಿ ನಿಯಮಾವಳಿಗಳು ಹಾಗೂ ಬದಲಾವಣೆಗಳ ಕುರಿತು ಮಾಹಿತಿ ನೀಡಿ ಶುಭಾಶಯಗಳೊಂದಿಗೆ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎ.ಸಿ ವಸಂತ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಕೆ. ಆರ್. ಗಂಗಾಧರ್, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಧನಂಜಯ ಮೇರ್ಕಜೆ ಹಾಗೂ ಪ್ರಭಾರ ಪ್ರಾಂಶುಪಾಲ ಎಸ್ ಸುರೇಶ್ ವಾಗ್ಲೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಸೋಮಶೇಖರ್ ಪಿ ಸ್ವಾಗತಿಸಿ ದೈಹಿಕ ಶಿಕ್ಷಕ ಪಿ. ಜಯರಾಮ್ ವಂದಿಸಿದರು. ಶ್ರೀಮತಿ ಶ್ರೀಲತಾ ಕಾರ್ಯಕ್ರಮ ನಿರೂಪಿಸಿದರು. ಪಂದ್ಯಾಟದಲ್ಲಿ ಒಟ್ಟು ಏಳು ಬಾಲಕರ ತಂಡ ಮತ್ತು ಒಂಭತ್ತು ಬಾಲಕಿಯರ ತಂಡಗಳು ಭಾಗವಹಿಸುತ್ತಿವೆ. ನೆಹರು ಸ್ಮಾರಕ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕಿ ಪಂದ್ಯಾಟದ ಸಂಪೂರ್ಣ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರು.










