ಬೂಡು ಬಳ್ಳಾಲರ ಪ್ರತಿನಿಧಿಯವರಿಂದ ನಿರಂತರ ನೈವೇದ್ಯ ಸಮರ್ಪಿಸುವ ಕಾರ್ಯ
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಸಂಭಂದಪಟ್ಟಂತೆ ವರ್ಷಂಪ್ರತಿ ಶ್ರಾವಣ ಮಾಸದಲ್ಲಿ ಪಯಸ್ವಿನಿ ನದಿಯ ದೇವರ ಮೀನುಗಳಿಗೆ ನೈವೇದ್ಯ ಸಮರ್ಪಿಸುವ ಕಾರ್ಯಕ್ರಮ ಆ. 23 ರಂದು ನಡೆಯಿತು.















ನಾಗಪಟ್ಟಣ ಸೇತುವೆ ಬಳಿಯಲ್ಲಿಪೂರ್ವ ಸಂಪ್ರದಾಯದಂತೆ ಶ್ರಾವಣ ಮಾಸದ ಅಮಾವಾಸ್ಯೆಯ ದಿನದಿಂದ ಚೆನ್ನಕೇಶವ ದೇವರ ಜಾತ್ರೋತ್ಸವದ ಧ್ವಜಾವರೋಹಣದ ತನಕ ನಿರಂತರವಾಗಿ ಪ್ರತಿದಿನ ಬಲ್ಲಾಳರ ಪ್ರತಿನಿಧಿ ಹಿರಿಯರು ನಡೆಸಿಕೊಂಡು ಬರುತ್ತಿದ್ದು ಇದೀಗ ಬೂಡು ರಾಧಾಕೃಷ್ಣ ರೈ ಯವರ ನೇತೃತ್ವದಲ್ಲಿ
ನೈವೇದ್ಯಸಮರ್ಪಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗುವುದು.
ಈ ಸಮಯದಲ್ಲಿ ತೊಡಿಕಾನ ಸೀಮೆಯ ಮಲ್ಲಿಕಾರ್ಜುನ ದೇವರ ಮೀನುಗಳು ನದಿಯಲ್ಲಿ ಈಪ್ರದೇಶಕ್ಕೆ ಬರುವುದು ಎಂಬ ಪ್ರತೀತಿ ಇದೆ.

ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ವಾರಂಬಳಿತ್ತಾಯ ರವರು ಪೂಜೆಯನ್ನು ನೆರವೇರಿಸಿದರು.
ದೇವಸ್ಥಾನದ ಅನುವಂಶಿಕ ಮೋಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ ರವರು ಪ್ರಾರ್ಥಿಸಿದರು.
ಬೂಡು ಭಗವತಿ ಕ್ಷೇತ್ರದ ನಾಲ್ಕು ಸ್ಥಾನಿಕ ಕ್ಷೇತ್ರದ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ, ನಗರ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಶೀಲ ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಸುಧಾಕರ ಕೇರ್ಪಳ,
ಸ್ಥಳೀಯರಾದ ಶಿವರಾಮ ಗೌಡ ಕೇರ್ಪಳ,ಭಾಸ್ಕರ ರೈ, ಮಿತ್ತೂರು,ಸುಭಾಷ್,
ಕುಸುಮಾಧರ ರೈ ಬೂಡು, ಉಮೇಶಬೂಡುಪನ್ನೆ,
ಜನಾರ್ಧನ ನಾಯ್ಕ್ ಕೇರ್ಪಳ, ಸುನಿಲ್ ಕೇರ್ಪಳ, ಲೋಕೇಶ್ ಸುಳ್ಯ, ಸುಕುಮಾರ, ಸತ್ಯಪ್ರಸಾದ್, ಹರಿಪ್ರಸಾದ್,ಮೋನಪ್ಪ ಪೂಜಾರಿ, ವಿಘ್ನೋಧರ, ವಾಸುದೇವನಾಯಕ್,ಮಹಾಬಲ ರೈ ಬೂಡು, ಸುಧಾಕರ ರೈ, ರವಿಚಂದ್ರ,ಕಿಶೋರ್ ಶೆಟ್ಟಿ, ನಿತ್ಯಾನಂದ, ಪ್ರದೀಪ್ ರೈ, ಬಾಲಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.










