ಕೊಲ್ಲಮೊಗ್ರು : ಶ್ರೀ ಕೃಷ್ಣ ಜನ್ಮಷ್ಟಾಮಿ ಆಚರಣೆ – ವಿವಿಧ ಆಟೋಟ ಸ್ಪರ್ಧೆಗಳು

0

ಕೊಲ್ಲಮೊಗ್ರು ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಯನ್ನು ಆ.15 ರಂದು ಆಚರಿಸಲಾಯಿತು. ಪುರುಷರಿಗೆ ಮಹಿಳೆಯರಿಗೆ ಮ್ಯಾರಥಾನ್ ನಡೆಯಿತು.
ನಡುಗಲ್ಲು ನಿಂದ ಕೊಲ್ಲಮೊಗ್ರು ತನಕ ಮ್ಯಾರಥಾನ್ ಓಟ 11.8 ಕಿ ಮೀ ಪುರುಷರಿಗೆ ಹಾಗೂ ಮಹಿಳೆಯರಿಗೆ ಹರಿಹರ ಪಲ್ಲತ್ತಡ್ಕದಿಂದ ಶ್ರೀ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನ ತನಕ 5.4 ಕಿ ಮೀ.ಓಟ ನಡೆಯಿತು.

ಮ್ಯಾರಥಾನ್ ನಲ್ಲಿ ರಾಜೇಶ್ ಹರಿಹರ-ಪ್ರಥಮ, ನಂದನ್ ಕೆ-ದ್ವಿತೀಯ. ಯಕ್ಷಿತ್ ವಳಲಂದೆ-ತೃತೀಯ ಹಾಗೂ ಮಹಿಳೆಯರಲ್ಲಿ ಬಿ .ಹೆಚ್ ವಿದ್ಯಾ ಬಂಗಾರಕೋಡಿ-ಪ್ರಥಮ, ದೇವಿಕಾ-ದ್ವೀತಿಯ, ದಮಯಂತಿ ಏನೆಕಲ್ಲು-ತೃತೀಯ ಸ್ಥಾನ ಪಡೆದರು.
ಮ್ಯಾರಥಾನ್ ನಲ್ಲಿ 40 ಕ್ಕಿಂತ ಹೆಚ್ಚು ಜನ ಭಾಗಿ ಆಗಿದ್ದರು.
ಎಣ್ಣೆ ಕಂಬ,ಅಡ್ಡ ಎಣ್ಣೆ ಕಂಬ ಇನ್ನಿತರ ಸ್ಪರ್ಧೆಗಳು ನಡೆದಿರುತ್ತದೆ.
ಎಣ್ಣೆ ಕಂಬದಲ್ಲಿ ಚಂದ್ರಶೇಖರ ತಳೂರು- ಪ್ರಥಮ ಸ್ಥಾನ ಪಡೆದರು.
ವನಮಹೋತ್ಸವ ಪ್ರಯುಕ್ತ ಗಿಡ ನೆಡುವ ಸ್ಪರ್ಧೆ, ಮೊಸರು ಕುಡಿಕೆ ನಡೆಯಿತು.
ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ ಮ್ಯಾರಥಾನ್ ನ್ನು ಚಂದ್ರಶೇಖರ ಕಡೋಡಿಯವರು ನಡುಗಲ್ಲಿನಲ್ಲಿ ಉದ್ಘಾಟನೆ ಮಾಡಿದರು. ಶ್ರೀಮತಿ ವಿಜಯ್ ಶಿವರಾಮ ಕಡ್ಡೋಡಿ ಹಾಗೂ ವಿಜಯ ಕುಮಾರ್ ಅಂಗಣ ಅವರು ಉಪಸ್ಥಿತರಿದ್ದರು. ಆನಂತರ ಆಟೋಟ ಸ್ಪರ್ಧೆಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಪಟ್ಟಡ ಪುಷ್ಪರಾಜ್ ಅವರು ದೀಪರಾಧನೆ ಮೂಲಕ ಉದ್ಘಾಟನೆ ಮಾಡಿದರು. ಹಾಗೂ ಸಮಾರೋಪ ಸಮಾರಂಭದಲ್ಲಿ ಪ್ರದೀಪ್ ಕುಮಾರ್ ಕೆ ಎಲ್ ಸಭಾಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮೋಹಿನಿ ಕಟ್ಟ, ಶೇಖರ ಅಂಬೆಕಲ್ಲು, ಮಾಧವ ಚಾಂತಾಳ,ಹರಿಪ್ರಸಾದ್ ಮಲ್ಲಾಜೆ,ವಿನುಪ್ ಮಲ್ಲಾರ, ಕಮಲಾಕ್ಷ ಮುಳುಬಾಗಿಲು, ಅನಂತರಾಮ ಮಣಿಯಾನ,ಬಾಲಕೃಷ್ಣ ಭಟ್ ಎನ್ ಜಿ, ಸದಾಶಿವ ಶಿಂಧಿಗಾರ್ ಸುರೇಶ್ ಪಿ ಉಪಸ್ಥಿತರಿದ್ದರು.

ಭಕ್ತಾಧಿಗಳು, ಊರ-ಪರ ಊರಿನ ಹಿತೈಷಿಗಳು, ಸಚಿನ್ ಸ್ಪೋರ್ಟ್ ಕ್ಲಬ್ ಹರಿಹರ ಪಲ್ಲತ್ತಡ್ಕ ವತಿಯಿಂದ ಅಂಬ್ಯುಲೆನ್ಸ್ ಸೇವೆ, ಆರಕ್ಷಕರು ಮತ್ತು ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಹಕಾರ ಹಾಗೂ ನೂರಾರು ಕ್ರೀಡಾಪಟುಗಳ ಸಹಕಾರದಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಯು ಗ್ರಾಮ ಹಬ್ಬದ ರೀತಿಯಲ್ಲಿ ನಡೆಯಿತು. ಚಂದ್ರಶೇಖರ ಕೋನಡ್ಕ ರವರು ಕಾರ್ಯಕ್ರಮ ನಿರೂಪಿಸಿದರು.