ಅಮಾನತಿನಲ್ಲಿದ್ದ ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರು

0

ಗ್ರಾಮಸ್ಥರಿಂದ ನಾಳೆ ಪಂಚಾಯತ್ ಎದುರು ಪ್ರತಿಭಟನೆ

ಕೊಲ್ಲಮೊಗ್ರು ಗ್ರಾ.ಪಂ ಸಿಬ್ಬಂದಿಯೋರ್ವರನ್ನು ಕರ್ತವ್ಯ ಲೋಪ ಆಧಾರದಲ್ಲಿ ಮೂರು ತಿಂಗಳ ಹಿಂದೆ ಅಮಾನತಿಲ್ಲಿಟ್ಟಿದ್ದು ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ನಾಳೆ ಆ‌ . 29 ಗ್ರಾ.ಪಂ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಪ್ರಸ್ತಾಪಿಸಿತ ಸಿಬ್ಬಂದಿಯ ಮೇಲೆ ಗ್ರಾ.ಪಂ ಸ್ವತ್ತು ಕಳವು ಆರೋಪ ಹೊರಿಸಿ ಅಮಾನಲ್ಲಿಟ್ಟಿದ್ದರು, ಅಲ್ಲದೆ ಗ್ರಾಮ ಸಭೆಯ ನಿರ್ಣಯ ದಿಕ್ಕರಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ, ಪ್ರಕರಣದಲ್ಲಿ ಭಾಗಿಯಾದವರನ್ನು ಹಾಗೂ ಆರೋಪಿತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.