🔷 ಖ್ಯಾತ ಪಿಲಿ ರಾಧಣ್ಣ ತಂಡದ ಹುಲಿ ಕುಣಿತ, ನಾಸಿಕ್ ಬ್ಯಾಂಡ್, ಭಜನಾ ತಂಡಗಳು ಮೊದಲಾದ ಮೆರುಗು
ಪಂಜ ಪರಿಸರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಆ.29 ರಂದು (ಇಂದು) ವೈಭವದ ಶೋಭಾಯಾತ್ರೆ ಅಪರಾಹ್ನ ಗಂಟೆ 3 ಕ್ಕೆ ಆರಂಭ ಗೊಳ್ಳಲಿದೆ.















ವೈಭವದ ಶೋಭಾಯಾತ್ರೆಯು ದೇಗುಲದ ವಠಾರದಿಂದ ಪಂಜ ಪೇಟೆಯ ಮೂಲಕ ಮುಖ್ಯರಸ್ತೆಯಲ್ಲಿ ಸಾಗಿ ಪಂಜ ಹೊಳೆಯ ಸೇತುವೆ ಬಳಿ ಜಲಸ್ತಂಭನ ಜರುಗಲಿದೆ. ಶೋಭಾಯಾತ್ರೆಯಲ್ಲಿ “ಖ್ಯಾತ ಪಿಲಿ ರಾಧಣ್ಣ ತಂಡದಿಂದ ತುಳುನಾಡಿನ ಹೆಮ್ಮೆಯ ಹುಲಿ ವೇಷ-ಕುಣಿತ, ಹಿಂದೂ ಜಾಗರಣ ವೇದಿಕೆಯ ನಾಸಿಕ್ ಬ್ಯಾಂಡ್ ಕೀಲು ಕುದುರೆ ,ಕುಣಿತ ಭಜನೆ ಮೊದಲಾದ ತಂಡಗಳು ಪಾಲ್ಗೊಳ್ಳಲಿವೆ.










