ಗುರುಗಳೆಡೆಗೆ – ನಮ್ಮ ನಡೆ : ನಿವೃತ್ತ ಅಧ್ಯಾಪಕ ನಿಂಗೇಗೌಡರಿಗೆ ಶಿಷ್ಯವೃಂದದಿಂದ ಸೆ.5 ರಂದು ಸನ್ಮಾನ

0

ಸೆ.05 ಶುಕ್ರವಾರ ದಂದು ಶಿಕ್ಷಕರ ದಿನಾಚರಣೆಯಂದು “ಗುರುಗಳೆಡೆಗೆ-ನಮ್ಮ ನಡೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಎನ್ನೆಂಸಿಯ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ನಿವೃತ್ತರಾದ, ರಾಜತಾಂತ್ರಿಕ ನಿಲುವುಗಳ ಬಗ್ಗೆ ಕರಾರುವಕ್ಕಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದ, ನಿಂಗೇಗೌಡ ರವರನ್ನು ಸೆ.05ರಂದು ಅವರ ಮನೆಗೆ ಸಂಜೆ ಗಂಟೆ 5.00ಕ್ಕೆ ತೆರಳಿ, ಗೌರಾವರ್ಪಣೆಯನ್ನು ಮಾಡಲು ಅವರ ಶಿಷ್ಯ ವೃಂದದವರು ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಶಿಷ್ಯರು, ಅಭಿಮಾನಿಗಳು ಬರಬೇಕೆಂದು ಕಾಠ್ಯಕ್ರಮದ ಸಂಚಾಲಕರುಗಳಾದ ದಿನೇಶ ಮಡಪ್ಪಾಡಿ ಮತ್ತು ಚಂದ್ರಶೇಖರ ಪೇರಾಲು ಹೇಳಿಕೆಯಲ್ಲಿ ತಿಳಿಸಿರುತ್ತಾರೆ.