ಸುಳ್ಯ ಸಿ.ಎ. ಬ್ಯಾಂಕ್ ನಲ್ಲಿ ಉಚಿತ ಮತ್ತು ರಿಯಾಯಿತಿ ದರದಲ್ಲಿ ಕಾಫಿ ಗಿಡ ವಿತರಣೆ

0

ಸುಳ್ಯ ಕೃಷಿ ಪತ್ತಿನ ಸಹಕಾರ ಸಂಘ (ಸಿ.ಎ.ಬ್ಯಾಂಕ್) ದ ವಾರ್ಷಿಕ ಮಹಾಸಭೆಯಲ್ಲಿ ಹೇಳಿದಂತೆ ಕಾಫಿ ಬೆಳೆಯ ಉತ್ತೇಜನಕ್ಕೆ ಸಂಬಂದಿಸಿದಂತೆ ಬೆಳೆ ಸಾಲ ಹೊಂದಿದ ರೈತ ಸದಸ್ಯರಿಗೆ Robusta CxR ತಳಿಯ ತಲಾ 5 ಕಾಫಿ ಗಿಡಗಳನ್ನು ಉಚಿತವಾಗಿ ಮತ್ತು ಇತರ “ಎ” ತರಗತಿ ಸದಸ್ಯರಿಗೆ ಗರಿಷ್ಟ 500 ಗಿಡಗಳವರೆಗೆ ಎಕ್ರೆಗೆ 250 ಗಿಡದಂತೆ) ರೂ 10.00 ಪ್ರತಿ ಗಿಡದಂತೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು ಎಂದು ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ ತಿಳಿಸಿದ್ದಾರೆ.

ಸದಸ್ಯರು ಸೆ. 10ರ ಒಳಗಾಗಿ ಒಂದು ಗಿಡಕ್ಕೆ ರೂ 10 ರಂತೆ ಅಡ್ವಾನ್ಸ್‌ ಪಾವತಿಸಿ ಆರ್.ಟಿ.ಸಿ.ವಿವರ ನೀಡಿ ಸಂಘದ ಪ್ರಧಾನ ಕಛೇರಿ ಯಾ ಅಜ್ಜಾವರ ಶಾಖೆಯಲ್ಲಿ ಬುಕ್ಕಿಂಗ್ ಮಾಡುವುದು. ಕಾಪಿ ಗಿಡಗಳನ್ನು ಕೆ.ವಿ.ಜಿ ಆಯುರ್ವೇದ ಕಾಲೇಜು ಬಳಿ ಇರುವ ನರೇಂದ್ರ ವಿಹಾರದಲ್ಲಿ ವಿತರಿಸಲಾಗುತ್ತದೆ. ಬುಕ್ಕಿಂಗ್ ಮಾಡಿದ ಸದಸ್ಯರು ಸಪ್ಟಂಬರ್‌  15ನೇ ತಾರೀಕಿನಿಂದ 25ನೇ  ತಾರೀಖಿನ ಒಳಗಾಗಿ ಬೆಳಗ್ಗೆ 10.00 ರಿಂದ ಸಾಯಂಕಾಲ 4.00ರ ಅವಧಿಯೊಳಗೆ ಈ ಸ್ಥಳದಿಂದ ಬುಕಿಂಗ್‌ ರಸೀದಿ ತೋರಿಸಿ ಗಿಡಗಳನ್ನು ತೆಗೆದುಕೊಂಡು ಹೋಗಬಹುದೆಂದು ಅವರು ತಿಳಿಸಿದ್ದಾರೆ.