ರಾಷ್ಟ್ರೀಯ ಕರಾಟೆ: ಶ್ರವಣ್ ಕೊಯಿಂಗೋಡಿಗೆ ತೃತೀಯ ಸ್ಥಾನ

0

ಉಡುಪಿಯಲ್ಲಿ ಸೆ. 6 ರಂದು ನಡೆದ ಪ್ರವೀಣ್ ಕುಮಾರ್ ಮೆಮೋರಿಯಲ್ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್- 2025 ರಲ್ಲಿ ಗೂನಡ್ಕದ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ 5 ನೇ ತರಗತಿ ವಿದ್ಯಾರ್ಥಿ ಶ್ರವಣ್ ಕೊಯಿಂಗೋಡಿಗೆ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಲಭಿಸಿದೆ.


ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಅಂಡ್ ಆರ್ಟ್ಸ್ ಮಲ್ಪೆ ಡೊಜೊ ವತಿಯಿಂದ ಉಡುಪಿಯ ಅಮೃತ ಗಾರ್ಡನ್ ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. 10 ವರ್ಷದ ಒಳಗಿನವರ ಕಟಾ ಹಾಗೂ ಕುಮಿಟೆ ಸ್ಪರ್ಧೆಯ ಎರಡೂ ವಿಭಾಗದಲ್ಲಿ ಶ್ರವಣ್ ಕೊಯಿಂಗೋಡಿ ತೃತೀಯ ಸ್ಥಾನ ಪಡೆದಿದ್ದಾರೆ.
ಈತ ಸುಳ್ಯ ಕೊಯಿಂಗೋಡಿಯ ದಿನೇಶ್ ಹಾಗೂ ಕಾವ್ಯಾ ದಂಪತಿಗಳ ಪುತ್ರ.