ಕಲ್ಲುಗುಂಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಕಾರು ಪಲ್ಟಿ, ಅಪಾಯದಿಂದ ಪಾರು

0

ಕಲ್ಲುಗುಂಡಿಯ ಸುಳ್ಯಕೋಡಿ ಸಮೀಪ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ಸೆ. 7 ರಂದು ಸಂಭವಿಸಿದೆ.

ಸಂಪಾಜೆಯಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಿಜಿಸ್ಟ್ರೇಷನ್ ನ ಕಾರು ಕಲ್ಲುಗುಂಡಿಯ ಸುಳ್ಯಕೋಡಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಕಾರನ್ನು ಹಗ್ಗದ ಮೂಲಕ ಮೇಲೆಕ್ಕೆತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ.