ತಾಹಿರಾಳ ಪತಿ ಲತೀಫ್ ಹಾಗೂ ಆತನ ಸಹೋದರ ರಫೀಕ್ ಮೇಲೆ ಪ್ರಕರಣ ದಾಖಲು
ಕಳೆದ ಒಂದು ವಾರದ ಹಿಂದೆ ಹಳೆಗೇಟು ನಿವಾಸಿ ತಾಯಿರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಮನೆಯವರು ಸುಳ್ಯ ಪೊಲೀಸ್ ವೃತ ನಿರೀಕ್ಷಕರ ಕಚೇರಿಗೆ ಮರು ದೂರನ್ನು ನೀಡಿದ್ದಾರೆ.
ಈ ಹಿಂದೆ ತಾಹಿರಾ ಮೃತ ಪಟ್ಟ ದಿನ ಸುಳ್ಯ ಠಾಣೆಯಲ್ಲಿ ನೀಡಿದ್ದ ದೂರಿನಲ್ಲಿ ಸರಿಯಾಗಿ ನಾವು ಹೇಳಿದ್ದನ್ನು ಉಲ್ಲೇಖ ಮಾಡಿಲ್ಲ ಮತ್ತು ಸರಿಯಾಗಿ ತನಿಖೆ ಆಗಿಲ್ಲ ಎಂದು ತಾಹೀರಾ ರವರ ಮನೆಯವರು ವಿಧಾನ ಸಭಾಧ್ಯಕ್ಷರಾದ ಯು ಟಿ ಖಾದರ್ ರವರ ಬಳಿ ದೂರಿಕ್ಕೊಂಡು ನಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಕೇಳಿಕ್ಕೊಂಡಿದ್ದರು.








ಬಳಿಕ ಮಂಗಳೂರು ಎಸ್ ಪಿ ಯವರ ಆದೇಶ ಮೇರೆಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮರು ದೂರನ್ನು ಮನೆಯವರು ನೀಡಿದ್ದು ದೂರಿನಲ್ಲಿ ‘ಅಜ್ಜಾವರ ಗ್ರಾಮದ ಬಯಂಬು ನಿವಾಸಿ ಅಬ್ದುಲ್ ಲತೀಫ್ ಬಿ ಎಚ್ ರವರಿಗೆ ಸುಮಾರು 8 ವರ್ಷ ಗಳ ಹಿಂದೆ ವಿವಾಹ ಮಾಡಿ ಕೊಡಲಾಗಿದ್ದು 2 ಗಂಡು ಮತ್ತು 1ಹೆಣ್ಣು ಮಗಳಿದ್ದಾರೆ.ಮದುವೆಯ ಸಮಯ ಸುಮಾರು 30 ಪವನ್ ಚಿನ್ನ ವರದಕ್ಷಿಣೆಯಾಗಿ ನೀಡಿದ್ದು ಇದೀಗ ಕಳೆದ 4 ವರ್ಷ ಗಳಿಂದ ತಾಯಿ ಮನೆಯಿಂದ ಹಣ ತಾ ಮತ್ತು ಚಿನ್ನ ತಾ ಎಂದು ಹಿಂಸೆ ನೀಡುತಿದ್ದ ಎಂದು ಮಗಳು ತಿಳಿಸಿರುತ್ತಾಳೆ.
28.8 2025 ರಂದು ಮದ್ಯಾಹ್ನ 3 ಗಂಟೆ ವೇಳೆ ಅಳಿಯ ಲತೀಫ್ ದೂರವಾಣಿ ಕರೆ ಮಾಡಿ ನಿಮ್ಮ ಮಗಳು ತಾಹೀರಾ ಕೋಣೆಯಲ್ಲಿ ನೇಣು ಹಾಕಿ ತೂಗಿಕ್ಕೊಂಡು ಇದ್ದಾಳೆ ಎಂದಿದ್ದಾರೆ. ಅದರಂತೆ ನಾವು ಅಲ್ಲಿ ಹೋಗಿ ನೋಡಿದಾಗ ಹಾಲ್ ನಲ್ಲಿ ಅಳಿಯ ಲತೀಫ್ ಮತ್ತು ಆತನ ತಮ್ಮ ರಫೀಕ್ ಹಾಲ್ ನಿಂತು ಕ್ಕೊಂಡಿದ್ದರು.
ಆದ್ದರಿಂದ ನನ್ನ ಮಗಳ ಆತ್ಮ ಹತ್ಯಗೆ ಆಕೆಯ ಗಂಡ ಲತೀಫ್ ಹಾಗೂ ಆತನ ಸಹೋದರ ರಫೀಕ್ ಬಿ ಹೆಚ್ ರವರ ಪ್ರೇರಿಣೆಯ ಕಾರಣವಾಗಿದ್ದು ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಿಗೆ ಮರು ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು ಆರೋಪಿಗಳ ಮೇಲೆ ಎಫ್ ಐ ಅರ್ ದಾಖಲಿಸಿಕ್ಕೊಂಡಿದ್ದು
ಯು/ಎಸ್ 157 ಸಿಆರ್.ಪಿಸಿ ನಿಬಂಧನೆ (ಎ) ಅಥವಾ (ಬಿ)/176 ಭಾರತೀಯ ನಾಗರಿಕ ಸುರಕ್ಷಾ ಸಂಹಿತ (ಬಿಎನ್‌ಎಸ್‌ಎಸ್) ಪ್ರಕಾರ ತನಿಖೆ ಮುಂದುವರೆಸಿದ್ದಾರೆ.










