ರೂ.136.22 ಕೋಟಿಗೂ ಮಿಕ್ಕಿ ವ್ಯವಹಾರ, ರೂ.36.59ಲಕ್ಷ ನಿವ್ವಳ ಲಾಭ
ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನವಾರ್ಷಿಕ ಮಹಾಸಭೆಯು ಸೆ.8 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು.















ಸಂಘವು ರೂ.136ಕೋಟಿ 22 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.32ಲಕ್ಷದ 59,870.47ನಿವ್ವಳ ಲಾಭಗಳಿಸಿದೆ.ರೂ. 2,51,14,167.85 ವಿವಿಧ ನಿಧಿಗಳಿವೆ.ರೂ.19,38,92,692.86 ವಿವಿಧ ಠೇವಣಾತಿಗಳು ಇದೆ. ರೂ.27ಕೋಟಿ 52,75,885.00 ವಿವಿಧ ಸಾಲ ನೀಡಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ತರಗತಿಯಲ್ಲಿ ಸಂಸ್ಥೆಯು ‘ಎ”ಮುನ್ನಡೆಯುತ್ತಿದೆ. ಎಂದು ಸಂಘದ ಅಧ್ಯಕ್ಷರಾದ ಪಿ ಉದಯ ಕುಮಾರ್ ಬೆಟ್ಟ ವಿವರಿಸಿದರು.
ಸಂಘದ ಉಪಾಧ್ಯಕ್ಷ ಯು ರಾಮ ನಾಯ್ಕ, ನಿರ್ದೇಶಕರಾದ ಯಂ ಬಾಲಕೃಷ್ಣ, ರವಿಕಿರಣ್ ಎ, ಹರೀಶ್ ಎಂ, ಅಶೋಕ ಜಿ, ಸುಧಾ ಎಸ್ ಭಟ್, ಮೀನಾಕ್ಷಿ ಬಿ, ತೃಪ್ತಿ ಯು, ಗೋಪಾಲ ಪಿ, ಮಹೇಶ್ ಎ, ವಿಶ್ವನಾಥ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕ ಪ್ರದೀಪ್ ಕೆ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿಂತಿಕಲ್ಲು ಬ್ರಾಂಚ್ ಮ್ಯಾನೇಜರ್ ಸುಧಾ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಅಭಿವೃದ್ಧಿ ಕುರಿತು ಸದಸ್ಯರು ಸಲಹೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ನಾರಾಯಣ ಕೆ ಪ್ರಾರ್ಥಿಸಿದರು. ಯಂ.ಬಾಲಕೃಷ್ಣ ಸ್ವಾಗತಿಸಿದರು. ಪ್ರಶಾಂತ್ ಜೆ ವರದಿ ವಾಚಿಸಿದರು.ಪೂವಕ್ಕ ಪಿ ಕಳೆದ ಸಾಲಿನ ಮಹಾಸಭೆ ನಿರ್ಣಯಗಳನ್ನು ವಾಚಿಸಿದರು .ಪುನೀತ್ ಮೂಲೆಮನೆ ನಿರೂಪಿಸಿದರು.ರವಿಕಿರಣ್ ಎ ವಂದಿಸಿದರು.










