ಅಧ್ಯಕ್ಷರಾಗಿ ಸೂರ್ಯ ನಾರಾಯಣ ಭಟ್, ಉಪಾಧ್ಯಕ್ಷ ಶಶಿಧರ್ ಪಳಾಂಗಾಯ ,ಕಾರ್ಯದರ್ಶಿಯಾಗಿ ಪಾರ್ವತಿ ಆಯ್ಕೆ















ಸುಳ್ಯ ತಾಲೂಕು ಔಷಧಿ ವಾಪ್ಯಾರಿಗಳ ೨೦೨೫_೨೬ ನೇ ಸಂಘದ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಎಸ್‌ಎಸ್‌ವಿಎಮ್ ಮೆಡಿಕಲ್ಸ್ ಶಿವರಾಮ ವಹಿಸಿದರು. ಅಧ್ಯಕ್ಷರಾಗಿ ಸೂರ್ಯ ನಾರಾಯಣ ಭಟ್ ಅರುಣ್ ಮೆಡಿಕಲ್ಸ್ ಬೆಳ್ಳಾರೆ, ಉಪಾಧ್ಯಕ್ಷರಾಗಿ ಪಂಜ ಸ್ವಾತಿ ಮೆಡಿಕಲ್ಸ್‌ನ ಶಶಿಧರ್ ಪಳಾಂಗಾಯ, ಖಜಾಂಜಿಯಾಗಿ ಅರಂತೋಡು ಕೃಷ್ಣ ಮೆಡಿಕಲ್ಸ್ ಸೌಮ್ಯ, ಕಾರ್ಯದರ್ಶಿಯಾಗಿ ಗುತ್ತಿಗಾರು ಮೆಡಿಕಲ್ಸ್‌ನ ಪಾರ್ವತಿ ಹಾಗೂ ಉಪಕಾರ್ಯದರ್ಶಿಯಾಗಿ ಗಾಂಧಿನಗರ ಪಟೇಲ್ ಮೆಡಿಕಲ್ಸ್‌ನ ಬದ್ರುದ್ದಿನ್ ಆಯ್ಕೆಯಾದರು .
ಮಾಸ್ಟರ್ ಮೆಡಿಕಲ್ಸ್‌ನ ಹರಿಚರಣ್ ಸ್ವಾಗತಿಸಿ, ಬೆಳ್ಳಾರೆ ಅರುಣ್ ಮೆಡಿಕಲ್ಸ್‌ನ , ಸೂರ್ಯ ನಾರಾಯಣ ಭಟ್ ವಂದಿಸಿದರು.










