ಕ್ರಮ ಕೈಗೊಳ್ಳುವಂತೆ ಒತ್ತಾಯ
ದೊಡ್ಡತೋಟ ಎಲಿಮಲೆ ರಸ್ತೆಯ ಮದ್ಯೆ ಗುಂಡಿಯಂಗಡಿ ಎಂಬಲ್ಲಿ ರಸ್ತೆಯಲ್ಲಿ ಸಂಚಾರಿಸುವ ದ್ವಿಚಕ್ರ ವಾಹನಗಳ ಮೇಲೆ ನಾಯಿಗಳು ದಾಳಿ ನಡೆಸುತ್ತಿದೆ ಎಂದು ತಿಳಿದು ಬಂದಿದೆ.















ರಸ್ತೆಯಲ್ಲಿ ಸಂಚಾರಿಸುವಾಗ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ನಾಯಿಗಳು ಬೊಗಳಿಕೊಂಡು ದಾಳಿ ನಡೆಸುತ್ತಿವೆ. ಇದೇ ರಸ್ತೆಯಲ್ಲಿ ಸಂಚರಿಸುತ್ತಿವ ಶಿಕ್ಷಕಿಯೊಬ್ಬರ ದ್ವಿಚಕ್ರ ವಾಹನದ ಮೇಲೆ ಎರಡು ಮೂರು ಬಾರಿ ನಾಯಿಗಳು ದಾಳಿ ಮಾಡಲು ಯತ್ನಿಸಿರುವುದಾಗಿಯೂ ತಿಳಿದು ಬಂದಿದೆ. ಹೀಗಾಗಿ ಸಂಬಂಧ ಪಟ್ಟವರು ನಾಯಿಗಳನ್ನು ರಸ್ತೆಗೆ ಬಿಡದಂತೆ ಎಚ್ಚರ ವಹಿಸಬೇಕಾಗಿದೆ. ಅಥವಾ ಸಂಬಂಧ ಪಟ್ಟ ಗ್ರಾಮ ಪಂಚಾಯತ್ ನಾಯಿಗಳನ್ನು ಬೀದಿಗೆ ಬಿಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿ ಬಂದಿದೆ.










