ಸುಳ್ಯದಲ್ಲಿ ಕಂದಾಯ ಅದಾಲತ್ ನಡೆಸಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿ ತ್ವರಿತ ಕ್ರಮಕ್ಕೆ ಕೆಡಿಪಿ ಸದಸ್ಯ ಅಶ್ರಫ್ ಗುಂಡಿ ಮನವಿ

0

ಸರಕಾರದ ಮಹತ್ವಾಕಾಂಕ್ಷೆಯ ಅಕ್ರಮ ಸಕ್ರಮ ಯೋಜನೆಯನ್ನು ಸಾರ್ವಜನಿಕರು ಸದುಪಯೊಗ ಪಡೆಯಲು ಸುಳ್ಯದಲ್ಲಿ ಅಕ್ರಮ ಸಕ್ರಮ ಸಮಿತಿ ಸಭೆ ನಡೆಸದೆ ಇರುವುದರಿಂದ ಸರಕಾರ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ. ಮತ್ತು ತಾಲೂಕಿನ ಅನೇಕರಿಗೆ ಅನ್ಯಾಯವಾಗಿದೆ. ಸಮಿತಿ ಸಭೆಯನ್ನು ಕರೆಯಲು ಸಂಬಂಧಪಟ್ಟ ಅಧಿಕಾರಿಗಳು ಆಸಕ್ತಿ ತೋರಿಸದೆ ಇರುವುದರಿಂದ ಸಂಶಯಕ್ಕೆ ಎಡೆಮಾಡಿದೆ. ಇದರ ಬಗ್ಗೆ ಕೆ.ಡಿ.ಪಿ ಸದಸ್ಯರು ಹಿಂದಿನ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ತಹಶೀಲ್ದಾರರನ್ನು ಸಭೆ ಕರೆಯಲು ಆಗ್ರಹಿಸಿದರು ಪ್ರಯೋಜನವಾಗಿಲ್ಲ. ಸರಕಾರಿ ಸ್ಥಳವಾಗಿದ್ದರು ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೇಳಲಾಗುತ್ತಿದೆ. ಅರಣ್ಯ ಇಲಾಖೆಯವರು ಅರಣ್ಯಕ್ಕೆ ಸೇರದೆ ಇದ್ದರು ಡೀಮ್ ಫಾರೆಸ್ಟ್ ಎಂದು ನಮೂದು ಮಾಡುವುದರಿಂದ ಮತ್ತು ಸ್ಥಳ ತನಿಖೆ ಮಾಡದೆ ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿ ರುದರಿಂದ ಅನೇಕ ಫಲಾನುಭವಿಗಳಿಗೆ ಅನ್ಯಾಯವಾಗಿದೆ.


ಆದುದರಿಂದ ಕಂದಾಯ ಸಚಿವರು ಈ ಬಗ್ಗೆ ತಕ್ಷಣ ಸುಳ್ಯದಲ್ಲಿ ಕಂದಾಯ ಅದಾಲತ್ ನ್ನು ನಡೆಸಿ ಅರ್ಜಿಗಳ ಸಮರ್ಪಕ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕೆಂದು ಕೆ ಡಿ ಪಿ ಸದಸ್ಯರಾದ ಅಶ್ರಫ್ ಗುಂಡಿ ಕಂದಾಯ ಸಚಿವರಾದ ಕೃಷ್ಣ ಬೈರೆ ಗೌಡ ರವರಿಗೆ ಮನವಿ ಸಲ್ಲಿಸಿದ್ದಾರೆ ಮತ್ತು ಪ್ರತಿಯನ್ನು ಉಸುವಾರಿ ಸಚಿವ ರಾದ ದಿನೇಶ್ ಗುಂಡು ರಾವ್ ರವರಿಗೆ ಕಳುಹಿಸಿ ಕೊಟ್ಟಿದ್ದಾರೆ.