ಸುಬ್ರಹ್ಮಣ್ಯ: ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲಿ

0

ಸಾರ್ವಜನಿಕರ ದೂರು, ತಾತ್ಕಾಲಿಕ ಸ್ಥಗಿತ, ಬೋರ್ಡ್ ಅಳವಡಿಕೆ, ಮರು ಆರಂಭ

ಸುಬ್ರಹ್ಮಣ್ಯದಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಿಧಿಸಿದರೆಂಬ ಸಾರ್ವಜನಿಕ ದೂರು ಬಂದು ಶುಲ್ಕ ವಿಧಿಸುವುದು ತಾತ್ಕಾಲಿಕವಾಗಿ ನಿಲ್ಲಿಸಿ ಬೋರ್ಡ್ ಅಳವಡಿಸಿದ ಬಳಿಕ ಪಾರ್ಕಿಂಗ್ ಶುಲ್ಕ ವಿಧಿಸಲು ಆರಂಭಿಸಿದ ಘಟನೆ ವರದಿಯಾಗಿದೆ.


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಸುಪಾಸು ಆಯ್ದ ಸ್ಥಳಗಳಲ್ಲಿ ಸೆ.೧೩ ರಿಂದ ಪಾರ್ಕಿಂಗ್ ಶುಲ್ಕ ಆರಂಭಗೊಂಡಿತ್ತು.


ಟೆಂಡರ್‌ದಾರರು ಟೆಂಡರ್‌ನಲ್ಲಿ ಸೂಚಿಸಿದಕ್ಕಿಂತ ಹೆಚ್ಚುವರಿ ಶುಲ್ಕ ವಿಧಿಸುವುದು ಗಮನಕ್ಕೆ ಬಂದು ಸಾರ್ವಜನಿಕರಿಂದ ದೂರು ಬಂದಿತ್ತು, ಅಲ್ಲದೆ ಮಾದ್ಯಮ ವರದಿಯೂ ಆಗಿತ್ತು.


ಇದರಿಂದ ಎಚ್ಚೆತ್ತ ಆಡಳಿತ ವ್ಯವಸ್ಥೆ ಇದಕ್ಕೆ ಸೂಕ್ತ ಕ್ರಮ ಕೈಗೊಂಡಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಪಾರ್ಕಿಂಗ್ ಶುಲ್ಕ ವಿಧಿಸುವ ಟೆಂಡರ್ ಪಡೆದವರಿಗೆ ನೋಟೀಸ್ ಜಾರಿ ಮಾಡಿದ್ದಾರೆ ಅಲ್ಲದೆ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಸೆ.೧೫ ರಿಂದ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಸ್ಥಗಿತಗೊಳಿಸಿದ್ದರು. ಇದೀಗ ಸೆ.೧೮ ರಂದು ಟೆಂಡರ್ ನಲ್ಲಿ ನಿಗದಿ ಪಡಿಸಿ ಪಾವತಿಸ ಬೇಕಾದ ಪಾರ್ಕಿಂಗ್ ಶುಲ್ಕ ಮಾಹಿತಿ ಇರುವ ಬೋರ್ಡ್ ಅಳವಡಿಸಿ ಮತ್ತೆ ಪಾರ್ಕಿಂಗ್ ಶುಲ್ಕ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.