ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧಿಕಾರಿ, ಸಿಬ್ಬಂದಿ ವರ್ಗದವರು ಸ್ಥಳೀಯ ದೇವರಗದ್ದೆ ಮಿತ್ರ ಬಳಗ, ಸಂಜೀವಿನಿ ಸ್ವಸಹಾಯ ಒಕ್ಕೂಟ ಜಂಟಿಯಾಗಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಇಂದು ಸುಬ್ರಹ್ಮಣ್ಯ ಸವಾರಿ ಮಂಟಪದ ಬಳಿಯ ಪಾರ್ಕಿಂಗ್ ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು.
















ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಅವರು “ಕುಕ್ಕೆ ಸುಬ್ರಹ್ಮಣ್ಯ ಪುಣ್ಯಕ್ಷೇತ್ರವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದೆ.ಈ ಕ್ಷೇತ್ರದ ಇಡೀ ಪರಿಸರವನ್ನು ಸ್ವಚ್ಛತೆಯಿಂದ ಇರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಇಡೀ ಪ್ರದೇಶ ಸ್ವಚ್ಛವಾಗಿದ್ದಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತಾದಿಗಳು ಸ್ವಚ್ಛ ಮನಸ್ಸಿನಿಂದ ದೇವರ ಸಾನಿಧ್ಯದಲ್ಲಿ ದರ್ಶನವನ್ನ ಮಾಡಿ ಹೋಗಬಹುದಾಗಿದೆ.

ನಾವುಗಳು ನಮ್ಮ ಮನೆ, ಪರಿಸರ, ಗ್ರಾಮ ವನ್ನ ಸ್ವಚ್ಛ ಇಟ್ಟುಕೊಂಡಲ್ಲಿ ಇಡೀ ದೇಶವು ಸ್ವಚ್ಛವಾಗಿರಲು ಸಾಧ್ಯವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ” ಎಂದು ನುಡಿದರು. ಸ್ವಚ್ಛದ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ಗ್ರಾಮ ಪಂಚಾಯತ್ ಸದಸ್ಯರುಗಳು, ದೇವರಗದ್ದೆ ಮಿತ್ರ ಮಂಡಲದ ಅಧ್ಯಕ್ಷ ಹಾಗು ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.










