ಸಾಮಾಜಿಕ , ಶೈಕ್ಷಣಿಕ ಸಮೀಕ್ಷೆ

0

ಸುಳ್ಯ ನಗರದಲ್ಲಿ ಭಾರೀ ಗೊಂದಲ

ತಹಶೀಲ್ದಾರ್, ಬಿ.ಇ.ಒ. ಮತ್ತಿತರರಿಂದ ಗಾಂಧಿನಗರದಲ್ಲಿ ಮನೆ ಪತ್ತೆ ಹಚ್ಚುವ ಪ್ರಯತ್ನ

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜಾತಿ ಗಣತಿ ಕಾರ್ಯ ಇಂದಿನಿಂದ ಆರಂಭಗೊಂಡಿದ್ದು, ಸುಳ್ಯ ನಗರದಲ್ಲಿ ಭಾರೀ ಗೊಂದಲ ಏರ್ಪಟ್ಟಿರುವುದಾಗಿ ತಿಳಿದುಬಂದಿದೆ.

ಮೆಸ್ಕಾಂನ ವಿದ್ಯುತ್ ಮೀಟರ್ ರೀಡರ್ ಗಳ ಮೂಲಕ ಮೀಟರ್ ನಂಬರಿನ ಆಧಾರದಲ್ಲಿ ಆ್ಯಪ್ ಮೂಲಕ ಜನರೇಟ್ ಆದ ನಂಬರನ್ನು ಪ್ರತೀ ಮನೆಯ ಗೋಡೆಗೆ ಅಂಟಿಸಲಾಗಿತ್ತು. ಆ ನಂಬರನ್ನು ಸಮೀಕ್ಷೆ ನಡೆಸುವ ಶಿಕ್ಷಕರಿಗೆ ಸಮೀಕ್ಷೆಗಾಗಿ ಅಲಾಟ್ ಮಾಡಲಾಗಿದ್ದು ಅದರಂತೆ ಸಮೀಕ್ಷೆ ನಡೆಸಬೇಕಾಗುತ್ತದೆ.


ಆದರೆ ಸುಳ್ಯ ನಗರದ ಗಾಂಧಿನಗರದಲ್ಲಿ ಸಮೀಕ್ಷೆ ನಡೆಸುವಾಗ ಮನೆಗೆ ಅಂಟಿಸಲಾದ ಮನೆಗೆ ಹೋಗುವ ದಾರಿ ಗೊತ್ತಾಗದೆ ಮನೆ ಪತ್ತೆ ಮಾಡಲಾಗಿರಲಿಲ್ಲ. ಜತೆಗೆ ದೊರೆತ ನಂಬರ್ ಗಳು ಸಮೀಕ್ಷಕರಲ್ಲಿರುವ ಆ್ಯಪ್ ಗೆ ಟ್ಯಾಲಿ ಆಗುತ್ತಿಲ್ಲವೆನ್ನಲಾಗಿದೆ. ಸಂಜೆವರೆಗೂ ಮನೆ ಪತ್ತೆಯಾಗದಿದ್ದುದರಿಂದ ಸಂಜೆ 6.30 ರ ವೇಳೆಗೆ ತಾಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾರ್ ಮಂಜುಳಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಾ, ಬಿ.ಇ.ಒ. ಶೀತಲ್ , ಉಪತಹಶೀಲ್ದಾರ್ ಚಂದ್ರಕಾಂತ್ ಮತ್ತಿತರರು ಸಮೀಕ್ಷಕರ ಜತೆಗೆ ಗಾಂಧಿನಗರಕ್ಕೆ ಬಂದು ಮನೆ ಹುಡುಕಾಟ ಆರಂಭಿಸಿದ್ದಾರೆ. ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಸದಸ್ಯ ಶರೀಫ್ ಕಂಠಿ ಯವರು ಅವರಿಗೆ ನೆರವು ನೀಡುತ್ತಿದ್ದಾರೆ. ಇದೀಗ ಬಂದ ಸುದ್ದಿಯ ಪ್ರಕಾರ ಒಂದು ಮನೆಯ ನಂಬರಗ ಮಾತ್ರ ಟ್ಯಾಲಿ ಬಂದು ಸಮೀಕ್ಷೆ ಕಾರ್ಯಕ್ಕೆ ಗಾಂಧಿನಗರದಲ್ಲಿ ಚಸಲನೆ ಸಿಕ್ಕಿದೆ. ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಗೊಂದಲ ನಿವಾರಣೆಗೆ ಅಧಿಕಾರಿಗಳು ಶತಪ್ರಯತ್ನ ಪಡತೊಡಗಿದ್ದಾರೆ.