














ಬೈಲೆ ಗೂನಡ್ಕ ಶಿರಾಡಿ ದೈವಸ್ಥಾನದ ಬ್ರಹ್ಮಕಲಶೋತ್ಸವ ನಡೆದು ೧೨ ವರ್ಷ ಆಗಿದ್ದು, ಆ ಪ್ರಯುಕ್ತ ಪುನರ್‌ಪ್ರತಿಷ್ಠೆ ನಡೆಸುವ ಬಗ್ಗೆ ಸೆ. ೨೨ರಿಂದ ದೈವಜ್ಞ ಅನಿಲ್ ತೋರೋತ್ ಹಾಗೂ ಶಶಿಧರ ನಾಯರ್ ಕುತ್ತಿಕೋಲ್‌ರವರ ನೇತೃತ್ವದಲ್ಲಿ ಅಷ್ಟಮಂಗಲ ನಡೆಯುತ್ತಿದೆ. ದೈವಸ್ಥಾನದಲ್ಲಿ ಆಗಬೇಕಾದ ಕೆಲವು ಜೀಣೋದ್ಧಾರದ ಬಗ್ಗೆ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೊಕ್ತೇಸರ ನಾರಾಯಣ ಕುಯಿಂತೋಡು, ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಲ್ಲುಗುಂಡಿ ಗೂನಡ್ಕ, ಆಡಳಿತ ಮಂಡಳಿ ಸದಸ್ಯರು, ಊರ ಭಕ್ತಾದಿಗಳು ಉಪಸ್ಥಿತರಿದ್ದರು.










