ಡಾ. ಕಿರಣ್ ಸಿ ಯವರ ಮಾಲಕತ್ವದ ಔಷಧ ಮತ್ತು ಔಷಧೀಯ ಉಪಕರಣಗಳ ಮಾರಾಟ ಮಳಿಗೆ ಕಿರಣ್ ಫಾರ್ಮಾ ಸೆ. 26ರಂದು ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಸಾಧನಾ ಸಹಕಾರ ಸೌಧದ ಮಹಡಿಯಲ್ಲಿ ಶುಭಾರಂಭಗೊಂಡಿತು.















ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ. ತ್ರಿಮೂರ್ತಿ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಪುರೋಹಿತ ನರಸಿಂಹ ಶಾಸ್ತ್ರಿ ಬಾಳಿಲ ವೈದಿಕ ಕಾರ್ಯ ನೆರವೇರಿಸಿದರು. ಸುಳ್ಯ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಡಾ. ಅನುಶ್ರೀ ಪಂಜ, ಅರಂತೋಡು ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ. ಪಾದ್ಮಾ, ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ಕಿರಣ್ ರ ತಂದೆ ಉನ್ನಿಕೃಷ್ಣ, ತಾಯಿ ಶ್ರೀಮತಿ ಶ್ರೀಜಾ, ಸಹೋದರ ಶರಣ್ ವಿ ಅತಿಥಿಗಳನ್ನು ಸ್ವಾಗತಿಸಿದರು. ನೂತನ ಸಂಸ್ಥೆಯಲ್ಲಿ ಔಷಧಗಳು ಮತ್ತು ಔಷಧೀಯ ಉಪಕರಣಗಳು ಕನಿಷ್ಠ ದರದಲ್ಲಿ ಮತ್ತು ಜೆನೆರಿಕ್ ಔಷಧಗಳು 50% ಡಿಸ್ಕೌಂಟ್ ದರದಲ್ಲಿ ದೊರೆಯುವುದರೊಂದಿಗೆ ರೋಗಿಗಳ ಮನೆಬಾಗಿಲಿಗೆ ತಲುಪಿಸಲಾಗುವುದೆಂದು ಡಾ. ಕಿರಣ್ ತಿಳಿಸಿದ್ದಾರೆ.










