ಸುಳ್ಯ ಎನ್ನೆಂಸಿಯಲ್ಲಿ ಎನ್.ಎಸ್.ಎಸ್ ದಿನಾಚರಣೆಯ ಪ್ರಯುಕ್ತ ಎನ್.ಎಸ್.ಎಸ್ ನ ಧ್ವಜಾರೋಹಣ ಕಾರ್ಯಕ್ರಮ

0

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ದಲ್ಲಿ ಎನ್. ಎಸ್. ಎಸ್ ದಿನಾಚರಣೆಯ ಪ್ರಯುಕ್ತ ಎಂ ಎನ್ ಎಸ್ ಎಸ್ ನ ಧ್ವಜಾರೋಹಣವನ್ನು ನಡೆಸಲಾಯಿತು.


ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ವೃಂದದವರು ಹಾಗೂ ಎನ್.ಎಸ್. ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ದ್ವಿತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಕು. ಅರ್ಪಿತಾ ಕಾರ್ಯಕ್ರಮ ನಿರೂಪಸಿದರು. ನಂತರ ಎನ್.ಎಸ್. ಎಸ್ ಸ್ವಯಂಸೇವಕರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದರು.