ಎನ್. ಎಸ್. ಎಸ್ ದಿನಾಚರಣೆಯ ಪ್ರಯುಕ್ತ ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳ ಆಯೋಜನೆ

0

ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಆಶ್ರಯದಲ್ಲಿ ಎನ್. ಎಸ್. ಎಸ್ ದಿನಾಚರಣೆಯ ಪ್ರಯುಕ್ತ ದಿನಾಂಕ ಸೆ. 23 ರಂದು ಎನ್ ಎಸ್ ಎಸ್ ನ ಕುರಿತಾದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಬಂದ, ರಸಪ್ರಶ್ನೆ, ನಶ ಮುಕ್ತ ಭಾರತ ವಿಷಯದ ಕುರಿತಾಗಿ ಪೋಸ್ಟರ್ ಮೇಕಿಂಗ್, ಎನ್.ಎಸ್.ಎಸ್ ಪ್ರಾರ್ಥನೆ ನಡೆಸಲಾಯಿತು. ತೀರ್ಪುಗಾರರಾಗಿ ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ
ದಿವ್ಯ ಟಿ.ಎಸ್ ವಾಣಿಜ್ಯ ವಿಭಾಗ, ಸಮಾಜ ಕಾರ್ಯ ವಿಭಾಗ ಉಪನ್ಯಾಸಕಿ ಶೋಭಾ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಹರ್ಷಿತಾ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ವೃಂದದವರು ಹಾಗೂ ಎನ್.ಎಸ್. ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಕು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು. ಅಭಿಜ್ಞಾ ಮತ್ತು ಪ್ರಾರ್ಥನಾ ಪ್ರಾರ್ಥಿಸಿದರು.