ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆವರಣದಲ್ಲಿ ನವರಾತ್ರಿ ಪ್ರಯುಕ್ತ
ನಾಗಶ್ರೀ ಸಂಜೀವಿನಿ ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟ
ಇದರ ಸಹಯೋಗದಲ್ಲಿ ಸಂಜೀವಿನಿ ಮಾಸಿಕ ಸಂತೆ ಸೆ. 26 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕಿ ಕು.ಭಾಗೀರಥಿ ಮುರುಳ್ಯ ಮತ್ತು ಶ್ರೀ ಶ್ರೀ ಶ್ರೀ ದಿಗಂಬರ ಕೃಷ್ಣಗಿರಿ ಮಹರಾಜ್‌ (ಹಿಮಾಲಯದ ಯಮನೋತ್ರಿ ಆಗಮನ) ನೆರವೇರಿಸಿದರು.

ಮಹಿಳೆಯರು ಸ್ವಉದ್ಯೋಗ ಮಾಡುತ್ತಾ ಸ್ವಾವಲಂಬಿ ಬದುಕಿಗೆ ಇದು ಸಹಕಾರಿಯಾಗಿದೆ. ಸಂಜೀವಿನಿಯನ್ನು ಉತ್ತಮ ವೇದಿಕೆಯನ್ನಾಗಿಸಿ ಇದರ ಮೂಲಕ ಉತ್ತೋರೋತ್ತರ ಅಭಿವೃದ್ಧಿಯಾಗಲಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮದ ಉದ್ಘಾಟಕರಾಗಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವನಿತಾ ಸುವರ್ಣ, ಉಪಾಧ್ಯಕ್ಷೆ ಕು| ಜಾನಕಿ, ಎನ್ ಆರ್ ಎಲ್ ಎಂ ಶ್ವೇತಾ ಮುರುಳ್ಯ, ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ವಸಂತ ನಡುಬೈಲು, ಕೇರ್ಪಡ ಮಹಿಷಮರ್ದಿನಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕನಾಥ ರೈ ಪಟ್ಟೆ, ಸದಸ್ಯರಾದ ಗುಣವತಿ ನಾವೂರು, ವಾಚಣ್ಣ ಹುದೇರಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಂತ್‌, ಸಂಜೀವಿನಿ ಅಧ್ಯಕ್ಷೆ ನೀಲಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೀತಾ ಕರುಣಾಕರ ಕಳತ್ತಜೆ ಪ್ರಾರ್ಥಿಸಿದರು. ನೇತ್ರಾವತಿ ಗೋಳ್ತಿಲ ಕಾರ್ಯಕ್ರಮ ನಿರೂಪಿಸಿದರು. ಶೈಲಜಾ ಸ್ವಾಗತಿಸಿ ಸವಿತಾ ವಂದಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಶ್ರೀಮತಿ ಶ್ವೇತಾ ಎ.ಜಿ., ತಾಲೂಕು ವ್ಯವಸ್ಥಾಪಕಿ ಮೇರಿ ಎಸ್‌, ವಲಯ ಮೇಲ್ವಿಚಾರಕಿ ಅವಿನಾಶ್‌ ತೆಲ್ಲಾರಿಯೋ, ವಲಯ ಮೇಲ್ವಿಚಾರಕಿ ಕೌಶಲ್ಯರೂಪ ಎಂ ಉಪಸ್ಥಿತರಿದ್ದರು. ಎಂಬಿಕೆ ಶೈಲಜಾ , ಎಲ್ ಸಿ ಆರ್ ಪಿ ಸವಿತಾ, ಪಶು ಸಖಿ ಗೀತಾ ಕರುಣಾಕರ ಕಳತ್ತಜೆ, ಕೃಷಿ ಸಖಿ ನೇತ್ರಾವತಿ ಭಾಗವಹಿಸಿದ್ದರು.

ಸುಳ್ಯ ತಾಲೂಕಿನ 25 ಗ್ರಾಮ ಪಂಚಾಯತ್‌ ಮಟ್ಟದ ಒಕ್ಕೂಟ ಸದಸ್ಯರು ತಯಾರಿಸಿರುವ ಮತ್ತು ವನಧನ ವಿಕಾಸ ಕೇಂದ್ರ ಅರಂತೋಡು ಇಲ್ಲಿನ ಸದಸ್ಯರು ತಯಾರಿಸಿರುವ ಗೃಹಪಯೋಗಿ ವಸ್ತುಗಳ ಮಾರಾಟ ನಡೆಯಿತು. ವರದಿ : ಸಂಕಪ್ಪ ಸಾಲಿಯಾನ್